ಬೆಂಗಳೂರು 27 ಮೇ : ದೇವನಹಳ್ಳಿ ತಾಲೂಕಿನ ವಿಜಯಪುರ ಹೋಬಳಿ ಮಂಡಿಬೆಲೆ ಗ್ರಾಮದ ರೈತರೂ ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯದಿಂದ ಹೈರಾಣ ಪಡುವಂತ ಪರಿಸ್ಥಿತಿ ಎದುರಾಗಿದೆ.
2004 ರಲ್ಲಿ ಮಂಡಿಬೆಲೆ ರೈತರಿಗೆ ಸರ್ಕಾರಿ ಭೂಮಿ ಮಂಜೂರಾಗಿತ್ತು. ಅದರಂತೆ ರೈತರು ಅಗತ್ಯ ದಾಖಲೆಯನ್ನ ಪಡೆದುಕೊಂಡು ಸಾಗುವಳಿಗೆ ಮುಂದಾಗಿದ್ದರು. 2009 ರಲ್ಲಿ ರಾತ್ರೋ ರಾತ್ರಿ ರೈತರ ಭೂಮಿಯ ಮೇಲೆ ದಾಳಿ ನೆಡೆಸಿದ ಅಧಿಕಾರಿಗಳು ಅಲ್ಲಿದ್ದ ಬೆಳೆಯನ್ನ ತೆರವುಗೊಳಿಸಿ ಅಲ್ಲಿ ಅಡ್ಡ ಕಾಲುವೆಯನ್ನ ನಿರ್ಮಾಣ ಮಾಡಿ ಅರಣ್ಯ ಕಾವಲುಗಾರರನ್ನ ನೇಮಿಸಿದ್ದರು. ಅರಣ್ಯ ಅಧಿಕಾರಿಗಳ ನಡೆಯನ್ನ ಖಂಡಿಸಿದ ಮಂಡಿಬೆಲೆ ರೈತರು ಸ್ಥಳೀಯ ಕಂದಾಯ ಅಧಿಕಾರಿಗಳಿಗೆ ಸಾಕ್ಷಿ ಸಮೇತ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರು. ಆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಅಂತ ಮಂಡಿಬೆಲೆ ರೈತ ಮುನಿರಾಜು ನಮ್ಮ ವಾಹಿನಿ ಮೂಲಕ ತಮ್ಮ ಆಳಲನ್ನ ತೋಡಿಕೊಂಡರು.
ಪೊಲೀಸರಿಂದ ಸಂಬಂಧ ಪಟ್ಟ ಅಧಿಕಾರಿಗಳಿಂದ ನ್ಯಾಯ ಸಿಗದೇ ಅರಣ್ಯ ಅಧಿಕಾರಿಗಳ ನಿತ್ಯ ಕಿರುಕುಳದಿಂದ ಬೇಸತ್ತಿದ್ದ ಮಂಡಿಬೆಲೆ ರೈತರು ತಮಗೆ ನ್ಯಾಯ ಕೊಡಿಸುವಂತೆ ನಮ್ಮ ವಾಹಿನಿಯ ಮೂಲಕ ನ್ಯಾಯದ ಮೊರೆ ಹೋಗಿದ್ದಾರೆ. ರೈತರ ದೂರನ್ನ ಮತ್ತು ಸತ್ಯ ಅಸತ್ಯತೆಯನ್ನ ಪರಿಶೀಲನೆ ಮಾಡಿದ ನಮ್ಮ ತಂಡ ಸ್ಥಳಕ್ಕೆ ಧಾವಿಸಿತು. ನಮ್ಮ ವಾಹಿನಿಯ ಕಾರ್ಯ ವೈಖರಿಯ ಸುದ್ದಿ ತಿಳಿದ ಅರಣ್ಯ ಅಧಿಕಾರಿಗಳು ಕೂಡಲೆ ಸ್ಥಳಕ್ಕೆ ಬಂದರು.ಆ ವೇಳೆ ಪ್ರತಿಕ್ರಿಯೆ ನೀಡಿದ ಅರಣ್ಯ ಇಲಾಖೆಯ ರೇಂಜರ್ ಆಫೀಸರ್ ಪಲ್ಲವಿ ಮಾತನಾಡಿ ಈಗಾಗಲೇ ಸ್ಥಳದ ಬಗ್ಗೆ ಜಂಟಿ ಸಮೀಕ್ಷೆ ನಡೆಸಲಾಗಿದೆ.ನಮ್ಮ ಅಧಿಕಾರಿಗಳು ವಿನಾಕಾರಣ ರೈತರಿಗೆ ತೊಂದರೆ ನೀಡುತ್ತಿಲ್ಲ. ನಮಗೆ ಬಂದ ಆದೇಶದಂತೆ ಇಲ್ಲಿ ಸಿಬ್ಬಂದಿಗಳನ್ನು ಕಾವಲಿಗಾಗಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
Post a comment
Log in to write reviews