ಅಯೋಧ್ಯೆ ರಾಮಮಂದಿರ ಮತ್ತು ರಾಮ ಮಂತ್ರ ಪಠಿಸುವ ವಾಚ್ 34 ಲಕ್ಷ ರೂ.ಗೆ ಮಾರಾಟ !
ಅಯೋಧ್ಯೆ: ವರ್ಷದ ಆರಂಭದಲ್ಲಿ ಅಂದ್ರೆ ಜನವರಿ 22ರಂದು ಅಯೋಧ್ಯೆಯಲ್ಲಿ ಹಿಂದೂಗಳ ಆರಾಧ್ಯದೈವ ಶ್ರೀರಾಮ ಮಂದಿರದ ಉದ್ಘಾಟನೆಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು. ಮಂದಿರದ ಉದ್ಘಾಟನೆಗೆ ದೂರದೂರಿನಿಂದೆಲ್ಲಾ ಲಕ್ಷಾಂತರ ಭಕ್ತಾದಿಗಳು ಆಗಮಿಸಿ ಪ್ರಭು ಶ್ರೀ ರಾಮರ ದರ್ಶನ ಪಡೆದಿದ್ದರು.
ಪ್ರಸಿದ್ಧ ವಾಚ್ ತಯಾರಿಕಾ ಕಂಪನಿಯಾದ ಸ್ವಿಸ್ ವಾಚ್ ತಯಾರಿಕಾ ಕಂಪನಿಯೊಂದು ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ನೆನಪುಗಳು ಶಾಶ್ವತವಾಗಿರಲೆಂದು ವಿಶೇಷವಾದ ರಾಮಜನ್ಮಭೂಮಿ ಲಿಮಿಟೆಡ್ ಎಡಿಷನ್ ವಾಚನ್ನು ಬಿಡುಗಡೆ ಮಾಡಿತು. ಈ ವಾಚ್ ಈಗ ಬರೋಬ್ಬರಿ 34 ಲಕ್ಷ ರೂ.ಗೆ ಮಾರಾಟವಾಗಿದ್ದು ಇದು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗ್ತಿದೆ.
ಈ ವಾಚ್‌ನ ವಿಶೇಷತೆ ಏನು ?
ಈ ವಾಚ್‌ನಲ್ಲಿರುವ ಮುಳ್ಳುಗಳು ಒಂಬತ್ತು ಗಂಟೆಗೆ ಬಂದಾಗ ರಾಮಮಂದಿರವನ್ನು ತೋರಿಸಿದರೆ, ಆರು ಗಂಟೆಗೆ ಸರಿಯಾಗಿ ಜೈ ಶ್ರೀರಾಮ್ ಎಂದು ರಾಮ ಮಂತ್ರವನ್ನು ಪಠಿಸುತ್ತದೆ. ಅಷ್ಟೇ ಅಲ್ಲದೆ ಕೇಸರಿ ಬಣ್ಣದ ಬೆಲ್ಟ್ ಹೊಂದಿರುವ ಈ ವಾಚ್‌ನಲ್ಲಿ ಪ್ರಭು ಶ್ರೀರಾಮ ಮತ್ತು ಭಗವಾನ್ ಹನುಮಂತನನ್ನು ಕಾಣಿಸುತ್ತದೆ. ಈ ವಾಚ್‌ಗೆ ಆಯ್ಕೆ ಮಾಡಿರುವ ಬಣ್ಣವು ಆಧ್ಯಾತ್ಮಿಕ, ಶುದ್ಧತೆ ಮತ್ತು ಭಕ್ತಿಯ ಸಾರವನ್ನು ಪ್ರತಿನಿಧಿಸುತ್ತದೆ ಎನ್ನಲಾಗಿದೆ.
ಜೊತೆಗೆ ಈ ವಾಚ್ ಹಿಂದೂ ಧರ್ಮದ ಮೌಲ್ಯಗಳನ್ನು ಬಿಂಬಿಸುತ್ತದೆ. ಇದಿಷ್ಟೇ ಅಲ್ಲದೆ ಇದರ ಮಹತ್ವ ಏನೆಂದರೆ ಆಳವಾದ ಸಾಂಸ್ಕೃತಿಕ ಪರಂಪರೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ವಾಚ್ ಅನ್ನು ಈ ರೀತಿ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
Post a comment
Log in to write reviews