ಕಿಲ್ಲರ್ ಹೀರೋ ದರ್ಶನ್ ನನ್ನು ಚಿತ್ರರಂಗದಿಂದ ಬ್ಯಾನ್ ಮಾಡಿ : ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ
ಬೆಂಗಳೂರು: ಕನ್ನಡ ನಾಡಿನ ಜನತೆ ದರ್ಶನ್ ಅವರನ್ನು ತಲೆಯ ಮೇಲೆ ಇಟ್ಟು ಮೆರೆಸಿತ್ತು. ಅವರ ಅಭಿಮಾನಿಗಳು ಅವರನ್ನು ದೇವರೆಂದು ಪೂಜಿಸುತ್ತಿದ್ದರು. ರಿಕ್ಷಾ, ಬೈಕ್ ಮನೆಯ ಮುಂಬಾಗಿಲಿಗೆ ದರ್ಶನ್ ಫೋಟೋ ಹಾಕಿ ಸಂತೋಷ ಪಡುತ್ತಿದ್ದರು. ಆದ್ರೆ ದರ್ಶನ್ ಮಾಡಿದ್ದೇನು. ಒಂದು ಅಶ್ಲೀಲ ಮೆಸೇಜಿಗೆಂದು ಕೊಲೆ ಮಾಡುವ ಹಂತಕ್ಕೆ ಇಳಿದಿದ್ದಾರೆ ಅಂತಹವರನ್ನು ಯಾರಾದರೂ ಹೀರೋ ಹೇಳ್ತಾರೆನ್ರಿ. ಕೊಲೆಗಾರರನ್ನು ಹೀರೋ ಎಂದು ಕರೆಯೋದಕ್ಕೆ ಆಗೋದಿಲ್ಲ. ಅಂತಹವರನ್ನು ಚಿತ್ರರಂಗದಿಂದ ಬ್ಯಾನ್ ಮಾಡ್ಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ನೆಲದ ಕಾನೂ ನು ಎಲ್ಲರಿಗೂ ಒಂದೇ. ಸಾಮಾನ್ಯನಾದರೂ, ದೊಡ್ಡ ಹೀರೋ ಆದರೂ ಒಂದೇ. ತಪ್ಪು ಯಾರು ಮಾಡಿದರೂ ತಪ್ಪು. ಚಿತ್ರದುರ್ಗದ ರೇಣುಕ ಸ್ವಾಮಿಯನ್ನು ಅಶ್ಲೀಲ ಮೆಸೇಜು ಮಾಡಿದನೆಂಬ ಕಾರಣ ಹೇಳಿ ಮನಬಂದಂತೆ ಕೊಚ್ಚಿ ಕೊಂದಿದ್ದು ಇವರ ರಾಕ್ಷಸ ಪ್ರವೃತ್ತಿ ತೋರಿಸುತ್ತದೆ. ದೊಡ್ಡ ಸೆಲೆಬ್ರಿಟಿ, ರಾಜಕಾರಣಿ, ಉದ್ಯಮಿ ಆದ ಮಾತ್ರಕ್ಕೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬರ್ಬರವಾಗಿ ಕೊಲೆಯಾದ ರೇಣುಕ ಸ್ವಾಮಿ ಕುಟುಂಬಕ್ಕೆ ಸರ್ಕಾರ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಹೇಳಿದ್ದಾರೆ.
Post a comment
Log in to write reviews