ನವದೆಹಲಿ: ಇನ್ನೆರಡು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 20ರಂದು ಚಾಲನೆ ನೀಡಲಿದ್ದಾರೆ. ಈ ಎರಡು ರೈಲುಗಳು ಮದುರೈ- ಬೆಂಗಳೂರು ಮತ್ತು ಚೆನ್ನೈ- ನಾಗರ್ಕೋಯಿಲ್ ಮಾರ್ಗವಾಗಿ ಸಂಚರಿಸಲಿವೆ. ಚೆನ್ನೈ ರೈಲು ನಿಲ್ದಾಣದಲ್ಲಿ ಪ್ರಧಾನಿಯವರು ಈ ರೈಲುಗಳಿಗೆ ಚಾಲನೆ ನೀಡಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈಗಾಗಲೇ 24 ರಾಜ್ಯಗಳು ಮತ್ತು 256 ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚು ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ.
Post a comment
Log in to write reviews