ಬ್ರಿಟನ್ ಸಂಸತ್ನಲ್ಲಿ ಬಸವೇಶ್ವರರ ಇವನಾರವ ಇವನಾರವ ವಚನ ಪಠಿಸಿ ಬೀದರ್ನ ಆದೀಶ್ ವಾಲಿ ಕನ್ನಡ ಪ್ರೇಮ ಮೆರೆದಿದ್ದಾರೆ. ಇದೀಗ, ಬ್ರಿಟಿಷರ ನಾಡಿನಲ್ಲಿ ಕನ್ನಡದ ಕಂಪು ಮೊಳಗಿಸಿದ ಬೀದರ್ ಯುವಕನಿಗೆ ಬಸವಣ್ಣ ಅವರ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬಸವಣ್ಣವರ ವಚನ ಪಠಿಸಿದ ಯುವಕ ಬೀದರ್ ಜಿಲ್ಲೆಯರು. ಬೀದರ್ನ ಡಾ. ರಜನೀಶ ವಾಲಿ ಪುತ್ರ ಆದಿಶ್ ವಾಲಿ ಪಿಯುಸಿ ವರೆಗೆ ಬೀದರ್ನಲ್ಲಿ ಅಭ್ಯಾಸ ಮಾಡಿ ನಂತರ ಲಂಡನ್ನಲ್ಲಿರುವ ಪ್ರತಿಷ್ಠಿತ ಕೋವೆಂಟ್ರಿ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ.ಲಂಡನ್, ಯುಕೆ ಕೌನ್ಸಿಲ್ನ ಮೊದಲ ಭಾರತೀಯ ಸದಸ್ಯ ಕೂಡಾ ಆಗಿರುವ ಆದೇಶ ವಾಲಿ ವಿದೇಶದಲ್ಲಿ ಕನ್ನಡದ ಕಂಪು ಮೂಡಿಸಿದ್ದಾರೆ. ಆದೇಶ ರಜನೀಶ್ ವಾಲಿ ಇಂಗ್ಲೆಂಡಿನ ಸಂಸತ್ ಭವನದಲ್ಲಿ ಕನ್ನಡದ ಕಲರವ ಮೂಡಿಸಿದ್ದಾರೆ. ವಿಶ್ವಗುರು ಬಸವೇಶ್ವರರ ‘ಇವನಾರವ ಇವನಾರವ’ ಎಂಬ ವಚನ ಪಠಿಸಿದ್ದಾರೆ.
Post a comment
Log in to write reviews