ಬೆಂಗಳೂರು: ಬಿಬಿಎಂಪಿಯಿಂದ (BBMP) ರಾಜಕಾಲುವೆ ಒತ್ತುವರಿ (Rajakaluve Encroachment) ಸರ್ವೆ ನಡೆಯುತ್ತಿದ್ದು, ರಾಜಕಾಲುವೆ ಒತ್ತುವರಿದಾರರಿಗೆ ಮತ್ತೆ ನಡುಕ ಆರಂಭವಾಗಿದೆ. ಮಳೆ ನಿಂತ ನಂತರ ಒತ್ತುವರಿ ತೆರವು (Rajakaluve clearance) ಮಾಡಲು ಬಿಬಿಎಂಪಿ ಸನ್ನದ್ಧವಾಗಿದೆ.
ಇದುವರೆಗೆ ಮಾಡಿರುವ ಸಮೀಕ್ಷೆಯಲ್ಲಿ 3182 ಕಟ್ಟಡಗಳನ್ನು ಡೆಮಾಲಿಷನ್‌ಗಾಗಿ ಗುರುತು ಮಾಡಲಾಗಿದೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿರುವುದರಿಂದ ಮಳೆ ನೀರು ಹರಿಯಲು ತಡೆ ಉಂಟಾಗಿ ನಗರದಲ್ಲಿ ಪ್ರವಾಹ ಸೃಷ್ಟಿಯಾಗುವ ಭೀತಿ ಸೃಷ್ಟಿಯಾಗಿದೆ. ಹೀಗಾಗಿ ಒತ್ತುವರಿ ತೆರವು ಮಾಡಲು ಬಿಬಿಎಂಪಿ ತೀರ್ಮಾನಿಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಬೆಂಗಳೂರು ಉಸ್ತುವಾರಿಯೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ಒತ್ತುವರಿ ತೆರವು ಮಾಡಲು ಬಿಬಿಎಂಪಿಗೆ ಕಠಿಣ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಯಾವ್ಯಾವ ವಲಯದಲ್ಲಿ ಎಷ್ಟು ಕಟ್ಟಡ ಡೆಮಾಲಿಷನ್‌ಗೆ ಗುರುತು?
ಮಹಾದೇವಪುರ ವಲಯದಲ್ಲಿ 1651 ಕಟ್ಟಡಗಳ ಗುರುತು
ಯಲಹಂಕ ವಲಯದಲ್ಲಿ 588 ಕಟ್ಟಡಗಳು ಗುರುತು
ಬೊಮ್ಮನಹಳ್ಳಿ ವಲಯದಲ್ಲಿ 368 ಕಟ್ಟಡಗಳ ಗುರುತು
ಪೂರ್ವ ವಲಯದಲ್ಲಿ 237 ಕಟ್ಟಡಗಳ ಗುರುತು
ಆರ್‌ಆರ್ ನಗರದಲ್ಲಿ 75 ಕಟ್ಟಡಗಳ ಗುರುತು
ಮೇಲೆ ಗುರುತಿಸಿರುವ ಕಟ್ಟಡಗಳನ್ನು ಕೆಡವಲು ಬಿಬಿಎಂಪಿ ಗುರುತು ಮಾಡಿಕೊಂಡಿದೆ. ಇದರಲ್ಲಿ ಪ್ರಭಾವಿಗಳ, ಶ್ರೀಮಂತರ ಒತ್ತುವರಿಗಳು ಕೂಡ ಸೇರಿವೆ. ಕೆಲವು ಕಡೆ ಭಾರೀ ಅಪಾರ್ಟ್‌ಮೆಂಟ್‌ಗಳು ಒತ್ತುವರಿ ಮಾಡಿಕೊಂಡಿದ್ದು, ಕಾನೂನು ತಗಾದೆಯೂ ಇದೆ. ಆಗಸ್ಟ್‌ನಿಂದ ಡೆಮಾಲಿಷನ್ ಕಾರ್ಯಾಚರಣೆ ಶುರುವಾಗಲಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಪ್ರವಾಹ ಪ್ರದೇಶದಲ್ಲಿರುವ ಒತ್ತುವರಿ ಮೊದಲು ತೆರವು ಮಾಡಿಕೊಳ್ಳಲಾಗುತ್ತದೆ. ತಹಶಿಲ್ದಾರರ ಮುಖಾಂತರ ತೆರವು ಕಾರ್ಯಾಚರಣೆಗೆ ಆದೇಶ ನೀಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
Post a comment
Log in to write reviews