ಹದಗೆಟ್ಟ ರಸ್ತೆಗಳ ರಿಪೇರಿಗೆ ಮುಂದಾದ ಬಿಬಿಎಂಪಿ : ಇನ್ನೊಂದು ತಿಂಗಳು ಈ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್!
ಬೆಂಗಳೂರು: ರಾಜಧಾನಿ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕೆಲಸಕ್ಕೆ ಬಿಬಿಎಂಪಿ ಕೈಹಾಕಿದೆ. ಹೀಗಾಗಿ ವಾಹನಗಳ ಸಂಚಾರದಲ್ಲಿ ಏರುಪೇರಾಗಲಿದೆ. ಬೆಂಗಳೂರಿನ ಅತಿ ಹೆಚ್ಚು ಜನದಟ್ಟಣೆ ಪ್ರದೇಶ ಅಂದರೆ ಅದು ಚಿಕ್ಕಪೇಟೆ ಹಾಗೂ ಕೆ.ಆರ್ ಮಾರುಕಟ್ಟೆ ಆಗಿದೆ. ಸದ್ಯ ಚಿಕ್ಕಪೇಟೆ, ಕೆ.ಆರ್.ಮಾರ್ಕೆಟ್ ಸುತ್ತ ಒಂದು ತಿಂಗಳ ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಬಿಬಿಎಂಪಿಯು ರಸ್ತೆ ರಿಪೇರಿ ಹಾಗೂ ಹೊಸ ರಸ್ತೆ ನಿರ್ಮಾಣ ಕಾಮಾಗಾರಿಯನ್ನು ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸುಮಾರು 30 ದಿನ ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸಲು ಮನವಿ ಮಾಡಲಾಗಿದೆ. ನಗರದ ಸಂಚಾರ ಪಶ್ಚಿಮ ವಿಭಾಗದ ಹಲಸೂರು ಗೇಟ್, ಚಿಕ್ಕಪೇಟೆ ಹಾಗೂ ಸಿ.ಟಿ.ಮಾರ್ಕೆಟ್ ಸಂಚಾರ ಪೊಲೀಸ್‌ರು ಈ ಕುರಿತು ಮಾಹಿತಿ ನೀಡಿದ್ದಾರೆ.
ಬಿಬಿಎಂಪಿಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ವಾಹನಗಳ ಸಂಚಾರಕ್ಕೆ ರಸ್ತೆ ಮಾರ್ಗಗಳಲ್ಲಿ ಕೆಲವು ಮಾರ್ಪಾಡು ಮಾಡಿದ್ದಾರೆ.
ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ?
ಕಬ್ಬನ್ ಪೇಟೆ ಮುಖ್ಯ ರಸ್ತೆ, ಅವೆನ್ಯೂ ರಸ್ತೆಯಿಂದ ಸಿದ್ದಣ್ಣಗಲ್ಲಿ, ಬನ್ನಪ್ಪಪಾರ್ಕ್ ರಸ್ತೆ, ಅವೆನ್ಯೂ ರಸ್ತೆಯಿಂದ 15ನೇ ಕ್ರಾಸ್, ವಿಲ್ ರಸ್ತೆ, ಡಾ.ಟಿಸಿಎಂ ರಾಯನ್ ರಸ್ತೆ ಜಂಕ್ಷನ್‌ನಿಂದ ಅಕ್ಕಿಪೇಟೆ ಮುಖ್ಯರಸ್ತೆ, ಆರ್.ಟಿ.ಸ್ಪೀಟ್‌ನಲ್ಲಿ ಬಿವಿಕೆ ಐಯ್ಯಂಗಾರ್ ರಸ್ತೆಯಿಂದ ಅವನೂ ರಸ್ತೆ, ಆರ್.ಟಿ.ಸ್ಪೀಟ್‌ನಲ್ಲಿ ಬಿವಿಕೆ ಐಯ್ಯಂಗಾರ್ ರಸ್ತೆಯಿಂದ ಬಳೆಪೇಟೆ ಮುಖ್ಯರಸ್ತೆ, ಸಿಟಿ ಸ್ಪೀಟ್‌ನಲ್ಲಿ ದೇವರದಾ ಸಿಮಯ್ಯ ರಸ್ತೆಯಿಂದ ನಗರ್ತ ಪೇಟೆ ಮುಖ್ಯ ರಸ್ತೆವರೆಗೆ ಒಂದು ತಿಂಗಳವರೆಗೆ ತಾತ್ಕಾಲಿಕವಾಗಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗಗಳು ಹೀಗಿವೆ
ಹಲಸೂರು ಗೇಟ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಕಬ್ಬನ್ ಪೇಟೆ ಮುಖ್ಯ ರಸ್ತೆಯಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ಬನ್ನಪ್ಪ ರಸ್ತೆ ಮತ್ತು ಕೆ.ಜಿ ರಸ್ತೆ ಬಳಸಬಹುದು. ಹಲಸೂರುಗೇಟ್ ಪೊಲೀಸ್ ಠಾಣೆ ಜಂಕ್ಷನ್‌ನಿಂದ ಅವೆನ್ಯೂ ರಸ್ತೆ ಕಡೆ ಸಂಚರಿಸುವ ವಾಹನಗಳು ಕೆ.ಜಿ. ರಸ್ತೆ ಮುಖಾಂತರ ಸಂಚರಿಸಿ ಅವೆನ್ಯೂ ರಸ್ತೆ ತಲುಪಬಹುದು. ಬನ್ನಪ್ಪ ರಸ್ತೆ ಕಾಮಗಾರಿ ಹಿನ್ನೆಲೆ ಕಬ್ಬನ್‌ಪೇಟೆ ಮುಖ್ಯ ರಸ್ತೆ ಬಳಸಬಹುದು. ಸಿ.ಟಿ.ಮಾರ್ಕೆಟ್ ಎಂದು ಬಿಬಿ ಎಂ ಪಿ ತಿಳಿಸಿದೆ
Post a comment
Log in to write reviews