ಬೆಂಗಳೂರು: ನಗರದ ಪ್ರತಿ ಮನೆಯ ಘನ ತ್ಯಾಜ್ಯ ಸಂಗ್ರಹಣೆಗೆ ಮಾಸಿಕ 100 ರೂಪಾಯಿ ಶುಲ್ಕವಿಧಿಸಲು ಬೆಂಗಳೂರು ಮಹಾನಗರ ಪಾಲಿಕೆ ಸಿದ್ದತೆ ಮಾಡಿಕೊಂಡಿದೆ. ಸಕಾ೯ರದ ಒಪ್ಪಿಗೆ ಪಡೆಯುತ್ತಿದಂತೆ ಮಾಸಿಕ ಶುಲ್ಕ ಜಾರಿಗೊಳಿಸಲಿದೆ. ಕಳೆದ ನಾಲ್ಕು ವರ್ಷದ ಹಿಂದೆ ನಗರದಲ್ಲಿ ಘನತ್ಯಾಜ್ಯ ಸೇವಾ ಶುಲ್ಕ ವಿಧಿಸುವ ಕುರಿತು ಚರ್ಚೆ ನಡೆಸಲಾಗಿದ್ದು ಜನರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ವಿಚಾರವನ್ನು ಕೈ ಬಿಡಲಾಗಿತ್ತು. ಆದರೆ ಈಗ ಸೇವಾ ಶುಲ್ಕ ವಸೂಲಿಗೆ ಪಾಲಿಕೆ ಮುಂದಾಗಿದೆ.
ಬೇರೆ ರಾಜ್ಯಗಳ ವರದಿ ಆಧರಿಸಿ ಸರ್ಕಾರಕ್ಕೆ ಕಂಪನಿ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ಅನೇಕ ದೇಶಗಳಲ್ಲಿ ಚಾಲ್ತಿಯಲ್ಲಿದ್ದು ಈ ಸಂಗತಿಯನ್ನಾಧರಿಸಿ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾರೆ. ಸರ್ಕಾರದಿಂದ ಅನುಮೋದನೆ ದೊರೆಯುತ್ತಿದಂತೆ ಸೇವಾ ಶುಲ್ಕ ವಸೂಲಿ ಆರಂಭಗೊಳ್ಳಲಿದೆ. ಈ ಹಿಂದೆ ವಿದ್ಯುತ್ ಬಿಲ್ ಮೂಲಕ ಸೇವಾ ಶುಲ್ಕ ವಿಧಿಸುವ ಬಗ್ಗೆ ಚರ್ಚೆ ನಡೆದಿತ್ತು ಆದರೆ ಗೃಹ ಜ್ಯೋತಿ ಯೋಜನೆ ಹಿನ್ನೆಲೆ ಬಹುತೇಕ ಮಂದಿ ಬಿಲ್ ಪಾವತಿ ಮಾಡಿಲ್ಲ .ಈ ಹಿನ್ನೆಲೆ ಅಸ್ತಿ ತೆರಿಗೆಯೊಂದಿಗೆ ಘನತ್ಯಾಜ್ಯ ಸೇವಾ ಶುಲ್ಕ ವಿಧಿಸುವ ಮೂಲಕ ಹಣ ಸಂಗ್ರಹಕ್ಕೆ ಸಿದ್ದತೆ ನಡೆಸಿದೆ.
ಈ ಕುರಿತು ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ 2016ರ ರೂಲ್ ಪ್ರಕಾರ ನೋಟಿಫಿಕೇಷನ್ ಆಗಿದೆ. ನಮ್ಮ ರಾಜ್ಯದ ಪಂಚಾಯಿತಿಗಳಲ್ಲಿ ಈಗಾಗಲೇ ಶುಲ್ಕ ವಸೂಲಾತಿ ಮಾಡಲಾಗುತ್ತಿದೆ. ಜನರಿಗೆ ಹೊರೆಯಾಗದಂತೆ ಕಡಿಮೆ ಹಣ ವಸೂಲಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ಅನುಮೋದನೆ ಕೊಟ್ಟ ನಂತರ ಘನ ತ್ಯಾಜ್ಯ ಸಂಗ್ರಹಣೆಗೆ ಶುಲ್ಕ ನಿಗಧಿ ಮಾಡಲಾಗುತ್ತದೆ ಎಂದು ತಿಳಿಸಿದರು.
Post a comment
Log in to write reviews