ಬೆಂಗಳೂರು: ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ, ಅವನ ಪಾಪಕರ್ಮ ಅವನನ್ನೇ ಸುಡುತ್ತದೆ ಕಲಿಯುಗದಲ್ಲಿ ದೇವರು ಕಲ್ಲಲ್ಲಾ, ಎಲ್ಲಾ ಕರ್ಮಕ್ಕು ತತಕ್ಷಣ ಪಲಿತಾಂಶ ಉಂಟು ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ, ಮದಕ್ಕೆ ಕಾರುಣ್ಯದ ಅರಿವಿಲ್ಲಾ ಹೀಗಂತ ಕನ್ನಡ ಚಿತ್ರ ನಟ ಜಗ್ಗೇಶ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸದ್ಯದ ಬೆಳವಣಿಗೆಗಳನ್ನು ಗಮನಿಸಿ ಜಗ್ಗೇಶ್ ತಮ್ಮ ಅಭಿಪ್ರಾಯಗಳನ್ನು ಈ ರೀತಿಯಾಗಿ ಹೊರಹಾಕಿದ್ದಾರಾ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಎದ್ದಿದೆ.
ಸರ್ವ ಆತ್ಮಾನೇನ ಬ್ರಹ್ಮ ಅಂದ್ರೆ ಎಲ್ಲಾ ಜೀವಿಗಳಲ್ಲೂ ಬ್ರಹ್ಮನಿದ್ದಾನೆ. ಯಾರನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ, ಹಾಗೊಂದು ವೇಳೆ ಇಂತಹ ಕೃತ್ಯಗಳಲ್ಲಿ ಭಾಗಿಯಾದ್ರೆ ಆತನನ್ನು ದೇವರು ಕ್ಷಮಿಸುವುದಿಲ್ಲ. ಅಲ್ಲದೇ ಆತ ಮಾಡಿದ ಕರ್ಮ ಆತನನ್ನೇ ಹಿಂಬಾಲಿಸುತ್ತದೆ. ಅವನು ಮಾಡಿದ ಪಾಪ ಕರ್ಮಗಳು ಕಿಚ್ಚಿನಂತೆ ಆತನನ್ನೇ ಸುಡುತ್ತದೆ. ಅದಕ್ಕೆಲ್ಲಾ ವರುಷಗಟ್ಟಲೆ ಕಾಯಬೇಕಂತೇನಿಲ್ಲಾ, ತಕ್ಷಣವೇ ಫಲಿತಾಂಶವನ್ನು ಉಣ್ಣಬೇಕಾಗುತ್ತದೆ. ಇನ್ನು ಮುಂದಾದರೂ ರಾಮನಾಗು ರಾವಣನಾದರೆ ಉಳಿಗಾಲವಿಲ್ಲಾ. ಇದನ್ನೆ ಸನಾತನ ಸಂಸ್ಕೃತಿ ಹೇಳುತ್ತದೆ ಎಂದು ಎಚ್ಚರಿಕೆಯ ಸಾಲುಗಳನ್ನ ಬರೆದುಕೊಂಡಿದ್ದಾರೆ.
Post a comment
Log in to write reviews