ಸೋಮವಾರ (ಮೇ.6 ರಂದು) ಜೂ.ಎನ್ ಟಿ ಆರ್ ಅಭಿನಯಿಸುತ್ತಿರುವ ದೇವರ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಜೇನು ನೊಣಗಳು ದಾಳಿ ನಡೆಸಿರುವ ಘಟನೆ ವರದಿಯಾಗಿದೆ.
ಅಲ್ಲೂರಿ ಜಿಲ್ಲೆಯ ಪಾಡೇರುವಿನ ಮೋದಕೊಂಡಮ್ಮ ಬಳಿ ಸಿನಿಮಾದ ಮಹತ್ವದ ದೃಶ್ಯವನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಆ ವೇಳೆ ಚಿತ್ರೀಕರಣ ನಡೆಸುತ್ತಿದ್ದಾಗ ಏಕಾಏಕಿ ಜೇನುನೊಣಗಳ ದೊಡ್ಡ ಗುಂಪೊಂದು ʼದೇವರʼ ತಂಡದ ಮೇಲೆ ದಾಳಿ ಮಾಡಿವೆ. ಮಾಹಿತಿಯ ಪ್ರಕಾರ ಈ ಘಟನೆಯಲ್ಲಿ ತಂಡದ ಯಾವುದೇ ಸದಸ್ಯರಿಗೆ ಪ್ರಾಣಾಪಾಯವಾಗಿಲ್ಲ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು. ಸ್ವಲ್ಪ ವಿರಾಮದ ನಂತರ ಶೂಟಿಂಗ್ ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಸಂದರ್ಭದಲ್ಲಿ ನಟ ಜೂ.ಎನ್ ಟಿಆರ್ ಸ್ಥಳದಲ್ಲಿ ಇರಲಿಲ್ಲ. ಅವರು ಸದ್ಯ ʼವಾರ್ -2ʼ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
Post a comment
Log in to write reviews