ಬೆಳಗಾವಿ: ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ರಸ್ತೆಗಳಿಗೆ ತೀವ್ರ ಹಾನಿಯಾಗಿದ್ದು, ಬೆಳಗಾವಿ ಹಾಗು ಮಹಾರಾಷ್ಟ್ರದ ಮೀರಜ್ ನಡುವೆ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿಶೇಷ ಪ್ಯಾಸೆಂಜರ್ ರೈಲು ಬಿಡಲಾಗಿದೆ.
ಬೆಳಗಾವಿ _ ಮೀರಜ್ ರೈಲು : ಪ್ರತಿದಿನ ಬೆಳಿಗ್ಗೆ 6.10ಕ್ಕೆ ಹೊರಟು 9.10ಕ್ಕೆ ಮೀರಜ್ ತಲುಪಲಿದೆ. ಮರಳಿ ಬೆಳಿಗ್ಗೆ 9.50ಕ್ಕೆ ಮೀರಜ್ನಿಂದ ಹೊರಟು ಮಧ್ಯಾಹ್ನ 12.50ಕ್ಕೆ ಬೆಳಗಾವಿ ತಲುಪತ್ತದೆ. ಹಾಗು ಮಧ್ಯಾಹ್ನ 1.30ರಿಂದ ಬೆಳಗಾವಿಯಿಂದ ಹೊರಟು ಸಂಜೆ 04.30ಕ್ಕೆ ಮೀರಜ್ ತಲುಪಲಿದೆ. ಮರಳಿ ಸಂಜೆ 05.35ಕ್ಕೆ ಮೀರಜ್ನಿಂದ ಹೊರಟು ರಾತ್ರಿ 08.35ಕ್ಕೆ ಬೆಳಗಾವಿ ತಲುಪುತ್ತದೆ.
ಜುಲೈ 31ರಿಂದ ಆಗಸ್ಟ್ 4ರವರೆಗೆ ಬೆಳಗಾವಿ-ಮೀರಜ್ ರೈಲು ದಿನಕ್ಕೆ 2 ಬಾರಿ ಓಡಾಟ ನಡೆಸಲಿದೆ. ಪ್ರಯಾಣಿಕರು ವಿಶೇಷ ರೈಲಿನ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮನವಿ ಮಾಡಿದ್ದಾರೆ.
Post a comment
Log in to write reviews