ಬೆಂಗಳೂರು: ಒಂದೆಡೆ ಮುಂಗಾರುಮಳೆ ಆರಂಭವಾಗುವ ಸಂತೋಷ. ಮತ್ತೊಂದೆಡೆ ಬಿರು ಬಿಸಿಲಿನಿಂದ ಯಾವಾಗ ಮುಕ್ತಿ ದೊರೆಯುತ್ತದೆಯೋ ಎಂದು ಕಾದಿದ್ದ ಬೆಂಗಳೂರಿಗರ ಮುಖದಲ್ಲಿ ಆತಂಕ ಮೂಡಿದೆ. ಅದಕ್ಕೆ ಮೂಲ ಕಾರಣವೆಂದರೆ ಸದ್ದಿಲ್ಲದೆ ಬೆಂಗಳೂರಿನ ಜನರನ್ನು ಕಾಡಲಾರಂಭಿಸಿದೆ ಡೆಂಗ್ಯೂ ಜ್ವರ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪ್ರಕರಣಗಳು ಆರೋಗ್ಯ ಇಲಾಖೆಗೆ ಸಹ ಕಗ್ಗಂಟಾಗಿದೆ.
ಕಳೆದ ತಿಂಗಳು ಒಟ್ಟೂ 2,877 ಪ್ರಕರಣಗಳು ವರದಿಯಾಗಿದ್ದವು. ಆದರೆ ಈ ತಿಂಗಳ ಈಗಾಗಲೇ 4,886ಕ್ಕೆ ತಲುಪಿದೆ. 2023ರಲ್ಲಿ 16,500ಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದ್ದವು. ಅದರಲ್ಲಿ 9 ಮಂದಿ ಮೃತಪಟ್ಟಿದ್ದರು. ಕಳೆದ ವರ್ಷ ಜೂನ್ ಬಳಿಕ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆಯಾಗಿತ್ತು. ಆದರೆ ಈ ವರ್ಷ ಜೂನ್‌ನಲ್ಲಿಯೇ ಏರಿಕೆ ಕಾಣತೊಡಗಿದ್ದು ಜನರನ್ನು ಆತಂಕ ದೂಡಿದೆ. ಈಗಾಗಲೇ ಆರೋಗ್ಯ ಇಲಾಖೆ ಡೆಂಗ್ಯೂ ಜ್ವರದ ಕುರಿತು ಜಾಗೃತಿಯನ್ನು ಮೂಡಿಸಲು ಆರಂಭಿಸಿದೆ.
Post a comment
Log in to write reviews