ಬೆಂಗೂಳೂರು: ಈ ಬಾರಿಯ ಬಿಸಿಲು ಎಲ್ಲರನ್ನೂ ಹೈರಾಣಾಗಿಸಿತ್ತು. ಈಗ ಮಳೆ ಬಂದುದರಿಂದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಅದರೆ ಬೆಸ್ಕಾಂಗೆ ಮಾತ್ರ ನಷ್ಟವಾಗಿದೆ. ಬೆಂಗಳೂರಲ್ಲಿ ನಿರಂತರವಾಗಿ ಭಾರೀ ಗಾಳಿ ಸಹಿತ ಸುರಿಯುತ್ತಿರುವ ಮಳೆಯಿಂದಾಗಿ ಬೆಸ್ಕಾಂ ವಿದ್ಯುತ್ ಕಂಬ, ತಂತಿಗಳಿಗೆ ಅಪಾರ ಹಾನಿಯಾಗಿದೆ. ಮಳೆಗಾಲ ಆರಂಭದಲ್ಲಿಯೇ ಕೋಟಿ ಕೋಟಿ ನಷ್ಟವಾಗಿ, ಬೆಸ್ಕಾಂಗೆ ಹೊಡೆತ ಬಿದ್ದಿದೆ.
ಬೆಂಗಳೂರು ನಗರ ಸೇರಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಗಾಳಿ ಮಳೆಯಿಂದ ಹಾನಿಯಾಗಿದೆ. ಅಲ್ಲದೆ ಬಿರುಗಾಳಿ ಸಹಿತ ಗಾಳಿ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದಿವೆ. ಇನ್ನೂ ಕೆಲವೆಡೆ ಸಿಡಿಲಿನಿಂದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಹಾನಿಯಾಗಿದೆ. ಕೇವಲ 15 ದಿನದಲ್ಲಿ ಬರೋಬ್ಬರಿ 6 ಕೋಟಿ 78 ಲಕ್ಷ ರೂ ನಷ್ಟವಾಗಿದೆ. 1 ಕೋಟಿ 64 ಲಕ್ಷ ರೂ ಮೌಲ್ಯದ 1,960 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಇದರಿಂದ ಬೆಸ್ಕಾಂ ಕೋಟಿ, ಕೋಟಿ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.
353 ಟ್ರಾನ್ಸ್‌ಫಾರ್ಮರ್ ಗಳಿಗೆ ಹಾನಿಯಾಗಿದ್ದು ಅಂದಾಜು ಮೌಲ್ಯ 4 ಕೋಟಿ 94 ಲಕ್ಷ ರೂ ನಷ್ಟವಾಗಿದೆ. ಮಳೆಗಾಲದ ಆರಂಭದಲ್ಲೇ 2.45ಲಕ್ಷ ಮೌಲ್ಯದ ತಂತಿ ಹಾಗೂ 30ಲಕ್ಷ ಮೌಲ್ಯದ ಡಿಪಿ ಸ್ಟ್ರಕ್ಟರ್ ಗೆ ಹಾನಿಯಾಗಿದೆ ಎಂದು ಬೆಸ್ಕಾಂ ವರದಿ ನೀಡಿದೆ.
Post a comment
Log in to write reviews