ಬೆಂಗಳೂರು: ಭವಾನಿ ರೇವಣ್ಣ ಅವರನ್ನು ಬಂಧಿಸಲು ಎಸ್ಐಟಿ ಹುಡುಕಾಟ ನಡೆಸುತ್ತಿದೆ. ಸಿಕ್ಕಿದ ತಕ್ಷಣ ಅವರ ಬಂಧನವಾಗಲಿದೆ ಎಂದು ಗೃಹ ಸಚಿವ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭವಾನಿ ರೇವಣ್ಣ ಎಲ್ಲಿದ್ದಾರೋ ಗೊತ್ತಿಲ್ಲ. ಅವರನ್ನು ಪೊಲೀಸರು ಹುಡುಕಿ, ಬಂಧಿಸಲಿದ್ದಾರೆ. ಇದೆಲ್ಲ ಕಾನೂನು ಪ್ರಕಾರ ನಡೆಯುತ್ತದೆ. ಈ ವಿಚಾರ ಸರ್ಕಾರಕ್ಕೆ ಸವಾಲಿನ ಪ್ರಶ್ನೆಯೇ ಅಲ್ಲ ಎಂದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ವಿಚಾರವಾಗಿ, ನಾಳೆ (ಜೂ.3) ಪರಿಷತ್ ಚುನಾವಣೆಗೆ ನಾಮಪತ್ರಕ್ಕೆ ಕೊನೆಯ ದಿನವಾಗಿದ್ದು, ಅದಕ್ಕೆ ಸಭೆ ಕರೆಯಲಾಗಿದೆ. ನಾಮಪತ್ರಕ್ಕೆ ಪತ್ರಕ್ಕೆ 10 ಜನ ಸಹಿ ಮಾಡಬೇಕು. ಇದೇ ಕಾರಣಕ್ಕೆ ಸಭೆ ಕರೆದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
Post a comment
Log in to write reviews