ಮುಂಬೈ: ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಪ್ಲಾನ್‌ನ ಶುಲ್ಕಗಳನ್ನು ಶೇ.20ರಷ್ಟು ಏರಿಕೆ ಮಾಡಲಾಗಿದೆ. ಜುಲೈ 3ರಿಂದ ರಿಲಯನ್ಸ್ ಜಿಯೋ ಹೊಸ ರೇಟ್ ಅನ್ವಯವಾಗಲಿದೆ.
28 ದಿನಗಳವರೆಗೆ 2 GB ಡೇಟಾ ಪ್ರತಿದಿನ ಅಲ್ಲ ಅನ್‌ಲಿಮಿಟೆಡ್ ಕರೆಗಳು ಇರುವ ರೂ. 155ರ ಪ್ಲಾನ್ ಈಗ 189 ರೂ.ಗೆ ಏರಿಕೆಯಾಗಿದೆ. ಪ್ರತಿದಿನ 1 GB ಇಂಟರ್‌ನೆಟ್ ಪ್ಲಾನ್‌ಗೆ 28 ದಿನಗಳಿಗೆ 209 ರೂ. ಬದಲು 249 ರೂ, ನಿತ್ಯ 1.5 ಜಿಬಿ ಪ್ಲಾನ್‌ಗೆ 239 ರೂ. ಬದಲು 299 ರೂ, 2 GB ಪ್ಲಾನ್‌ಗೆ 299 ರೂ. ಬದಲು 349 ರೂ, 2.5 GBಗೆ 349 ರೂ. ಬದಲು 399 ರೂ, 3 GBಗೆ 399 ರೂ. ಬದಲು 449 ರೂ.ಗೆ ಏರಿಕೆಯಾಗಿದೆ.
ಎರಡು ಹಾಗೂ ಮೂರು ತಿಂಗಳ ಪ್ಲಾನ್‌ಗಳ ಬೆಲೆಯನ್ನೂ ಏರಿಕೆ ಮಾಡಲಾಗಿದೆ. ಎರಡು ತಿಂಗಳ ಪ್ರತಿ ದಿನ 1.5 GB ಇಂಟರ್‌ನೆಟ್, ಅನ್‌ಲಿಮಿಟೆಡ್ ಕರೆಗಳಿಗೆ ಇನ್ನು 479 ರೂ. ಬದಲು 579 ರೂ, 2 GBಗೆ 533 ರೂ. ಬದಲು 629, 3 ತಿಂಗಳು ಅನ್‌ಲಿಮಿಟೆಡ್ ಕರೆ, 6 GB ಇಂಟರ್‌ನೆಟ್ ಪ್ರತಿದಿನ ಅಲ್ಲ ಪ್ಲಾನ್‌ಗೆ 395 ರೂ. ಬದಲಾಗಿ 479 ರೂ. ಪಾವತಿಸಬೇಕಾಗುತ್ತದೆ. ಮೂರು ತಿಂಗಳು ಪ್ರತಿ ದಿನ 1.5 GB ಅಂತರ್ಜಾಲ, ಅನ್‌ಲಿಮಿಟೆಡ್ ಕಾಲ್ಸ್ ಪ್ಲಾನ್‌ಗೆ 666 ರೂ. ಬದಲಾಗಿ 799 ರೂ. 2 GBಗೆ 719 ರೂ. ಬದಲು 859 ರೂ., 3 GBಗೆ 999 ರೂ. ಬದಲಾಗಿ 1,199 ರೂ. ಪಾವತಿಸಬೇಕಾಗಿದೆ.
ಭಾರತದಲ್ಲಿ ಸುಮಾರು 45 ಕೋಟಿಗೂ ಅಧಿಕ ಜಿಯೋ ಗ್ರಾಹಕರಿದ್ದು, ಜಿಯೋ ಪ್ಲಾನ್ ಏರಿಕೆಯಿಂದ ಎಲ್ಲಾ ಬಳಕೆದಾರರಿಗೂ ಶಾಕ್ ನೀಡಿದೆ.
Post a comment
Log in to write reviews