ಯೂಟ್ಯೂಬರ್ಸ್, ಟ್ರೋಲರ್ಸ್ಗಳಿಗೆ ಬಿಗ್ ಶಾಕ್ ಬರೋಬ್ಬರಿ 25 ಯೂಟ್ಯೂಬ್ ಚಾನೆಲ್ಗಳನ್ನು ಡಿಲೀಟ್ ಮಾಡಿಸಿದ ಚಿತ್ರರಂಗ
ಬೆಂಗಳೂರು:ಸಿನಿಮಾ ತಾರೆಯರ ಬಗ್ಗೆ ಬೇಕಾಬಿಟ್ಟಿ ಮಾತನಾಡುತ್ತಿದ್ದ, ಟ್ರೋಲ್ ಮಾಡುತ್ತಿದ್ದ ಯೂಟ್ಯೂಬರ್ಗಳಿಗೆ ಚಿತ್ರರಂಗ ಬಿಗ್ ಶಾಕ್ ಕೊಟ್ಟಿದೆ.
ನಟ-ನಟಿಯರ ಬಗ್ಗೆ ಸುಳ್ಳು ಸುದ್ದಿ ಹರಡುವ, ಸಿನಿಮಾಗಳ ಬಗ್ಗೆ ನೆಗೆಟಿವ್ ವಿಮರ್ಶೆ ನೀಡುವ ಯೂಟ್ಯೂಬ್ ಚಾನೆಲ್ಗಳ ಮೇಲೆ ಗರಂ ಆಗಿರುವ ತೆಲುಗು ಚಿತ್ರರಂಗ, ಇದೀಗ ಬರೋಬರಿ 25 ಯೂಟ್ಯೂಬ್ ಚಾನೆಲ್ಗಳನ್ನು ಪೊಲೀಸರ ಸಹಾಯದಿಂದ ಡಿಲೀಟ್ ಮಾಡಿಸಿದೆ. ಈಗಾಗಲೇ 25 ಯೂಟ್ಯೂಬ್ ಚಾನೆಲ್ಗಳನ್ನು ಡಿಲೀಟ್ ಮಾಡಿಸಿರುವ ಟಾಲಿವುಡ್, ಸರಿಸುಮಾರು 200 ಯೂಟ್ಯೂಬ್ ಚಾನೆಲ್‌ಗಳ ಪಟ್ಟಿ ಮಾಡಿ, ಇದರ ವಿರುದ್ಧ ಕ್ರಮ ಕೈಗೊಳ್ಳಲು ತಯಾರಿ ನಡೆಸಿದೆ.
ಇಷ್ಟು ಮಾತ್ರವಲ್ಲದೇ, ಸೈಬರ್ ಕ್ರೈಂ ಕೂಡ ಯೂಟ್ಯೂಬ್ ಚಾನೆಲ್ಗಳ ಮೇಲೆ ಕಣ್ಣಿಟ್ಟಿದೆ. ಇವತ್ತು ತೆಲುಗು ಚಿತ್ರರಂಗದಲ್ಲಿ ಯೂಟ್ಯೂಬ್ ಚಾನೆಲ್ ಬ್ಯಾನ್ ಆಗಿದೆ. ಆದರೆ ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಯೂಟ್ಯೂಬ್ ಚಾನೆಲ್ಗಳು ಕೂಡ ಬ್ಯಾನ್ ಆಗೋ ಸಾಧ್ಯತೆಯಿದೆ.
ಕನ್ನಡಿಗರೇ ನೀವು ಎಚ್ಚರವಾಗಿರಿ. ಯೂಟ್ಯೂಬ್ನಲ್ಲಿ ಬೇಕಾಬಿಟ್ಟಿ ಮಾತನಾಡುವುದು. ಟ್ರೋಲ್ ಮಾಡುವುದು ಮಾಡಿದ್ರೇ ನಿಮ್ ಚಾನೆಲ್ ಕೂಡ ಬ್ಯಾನ್ ಲಿಸ್ಟ್ಗೆ ಸೇರಿಕೊಳ್ಳುತ್ತೆ. ನಟ-ನಟಿಯರ ಖಾಸಗಿ ಬದುಕಿನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳೋ ಯೂಟ್ಯೂಬ್ ಚಾನೆಲ್ಗಳ ಮೇಲೆ ಸಾಕಷ್ಟು ಕೇಸ್ಗಳು ಬಿದ್ದು, ಜೈಲೂಟ ಮಾಡೋದು ಗ್ಯಾರೆಂಟಿ ಎಂದು ಹೇಳಲಾಗುತ್ತಿದೆ.
Post a comment
Log in to write reviews