ಶಿಮ್ಲಾ : ಹೆಣ್ಣುಮಕ್ಕಳ ಕನಿಷ್ಠ ವಿವಾಹ ವಯಸ್ಸನ್ನು 21 ಕ್ಕೆ ಏರಿಸುವ ಮಸೂದೆಯನ್ನು ಹಿಮಾಚಲ ಪ್ರದೇಶ ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿದೆ.
ರಾಜ್ಯದಲ್ಲಿ ಹೆಣ್ಣುಮಕ್ಕಳ ಕನಿಷ್ಠ ವಿವಾಹ ವಯಸ್ಸು 18 ವರ್ಷ ಇದ್ದು ಅದನ್ನು 21 ವರ್ಷಕ್ಕೆ ಹೆಚ್ಚಿಸಲು ವಿಧಾನಸಭೆ ಮಸೂದೆ ಅಂಗೀಕಾರ ಮಾಡಿದೆ.ಏಳು ತಿಂಗಳ ಹಿಂದೆ ಪರಿಷ್ಕೃತ ಕರಡಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ.
ಹಿಮಾಚಲ ಪ್ರದೇಶ ಬಾಲ್ಯ ವಿವಾಹ ನಿಷೇಧ ಮಸೂದೆ 2024 ಅನ್ನು ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ಆರೋಗ್ಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಧನಿರಾಮ್ ಶಾಂಡಿಲ್ ತಿಳಿಸಿದ್ದಾರೆ
ಮಸೂದೆಯನ್ನು ಯಾವುದೇ ವಿರೋಧ ಅಥವಾ ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು, ಈ ವಿಷಯದ ಬಗ್ಗೆ ಶಾಸಕರಲ್ಲಿ ಒಮ್ಮತ ವ್ಯಕ್ತಪಡಿಸಿದ್ದರು. ಈ ತಿದ್ದುಪಡಿಯು ಹೆಣ್ಣುಮಕ್ಕಳ ಕಾನೂನುಬದ್ಧ ವಿವಾಹ ವಯಸ್ಸನ್ನು ಮೂರು ವರ್ಷಗಳವರೆಗೆ ಹೆಚ್ಚಿಸುತ್ತದೆ. ಇದೀಗ ಅಂತಿಮ ಅನುಮೋದನೆಗಾಗಿ ಮಸೂದೆಯನ್ನು ರಾಜ್ಯಪಾಲರಿಗೆ ರವಾನಿಸಲಾಗುವುದು ಎಂದು ಹೇಳಿದ್ದಾರೆ
ಇದಕ್ಕೂ ಮುನ್ನ ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಿದ ಆರೋಗ್ಯ ಮತ್ತು ಮಹಿಳಾ ಸಬಲೀಕರಣ ಸಚಿವ ಧನಿ ರಾಮ್ ಶಾಂಡಿಲ್, ಬಾಲ್ಯವಿವಾಹ ನಿಷೇಧಕ್ಕಾಗಿ 2007 ರ ಬಾಲ್ಯ ವಿವಾಹ ಕಾಯ್ದೆ ಜಾರಿಗೊಳಿಸಲಾಗಿದೆ, ಲಿಂಗ ಸಮಾನತೆ ಒದಗಿಸಲು ಹೆಣ್ಣುಮಕ್ಕಳ ಕನಿಷ್ಠ ವಿವಾಹದ ವಯಸ್ಸನ್ನು ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಸಚಿವ ಧನಿ ಹೇಳಿದ್ದಾರೆ
ಉನ್ನತ ಶಿಕ್ಷಣ ಪಡೆಯುವ ಅವಕಾಶಗಳು.ನಶಿಸುತ್ತದೆ ಅಲ್ಲದೆ ,ಚಿಕ್ಕ ವಯಸ್ಸಿನಲ್ಲಿ ಗರ್ಭಧಾರಣೆಯು ಹುಡುಗಿಯರ ಆರೋಗ್ಯದ ಮೇಲೆ ದುಷ್ಟ್ ಪರಿಣಮಾ ಬೀರುತ್ತದೆ, ಹೀಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು ಸದನ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು ರಾಜ್ಯಪಾಲರು ಅಂಕಿತ ಹಾಕಿದರೆ ಹೊಸ ಕಾನೂನು ರಾಜ್ಯದಲ್ಲಿ ಜಾರಿಗೆ ಬರಲಿದೆ. ಎಂದು ಹೇಳಿದ್ದಾರೆ.
Post a comment
Log in to write reviews