ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಕಮಿಷನರ್‌ಗೆ ಬಿಜೆಪಿ ನಾಯಕರ ಮನವಿಯನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ.
ನೃಪತುಂಗ ರಸ್ತೆಯ ಕಮಿಷನರ್ ಆಫೀಸ್‌ಗೆ ಇಂದು (ಆಗಸ್ಟ್ 20) ಭೇಟಿ ನೀಡಿದ ಬಿಜೆಪಿ ನಾಯಕರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ದುರುಪಯೋಗ ಪಡಿಸಿಕೊಂಡು ರಾಜ್ಯಪಾಲರಿಗೆ ಅವಮಾನ ಆಗುವ ರೀತಿಯಲ್ಲಿ ಕಾಂಗ್ರೆಸ್ ನಾಯಕರನ್ನ ಎತ್ತಿಹಿಡಿಯುವಂತದ್ದು, ರಾಜ್ಯಪಾಲರ ಪೋಟೋಗೆ ಚಪ್ಪಲಿಯಿಂದ ಹೊಡೆಯುವಂತದ್ದು, ಅವಾಚ್ಯ ಶಬ್ಧಗಳಿಂದ ನಿಂದಿಸುವಂತದ್ದು ವಿಧಾನ ಪರಿಷತ್ ಸದಸ್ಯರೊಬ್ಬ ಗವರ್ನರ್‌ಗೆ, ಬೆದರಿಕೆ ಹಾಕುವ ರೀತಿಯಲ್ಲಿ ಮಾತಾಡಿದ್ದಾರೆ. ಅದೇನೆಂದರೆ, ಬಾಂಗ್ಲಾದೇಶದ ಪ್ರಧಾನಿಗೆ ಬಂದಂತ ಪರಿಸ್ಥಿತಿ ನಿಮಗೂ ಬರುತ್ತದೆ, ಅಂತಹ ಪರಿಸ್ಥಿತಿ ನಿರ್ಮಾಣ ಮಾಡುತ್ತೇವೆ. ರಾಜಭವನಕ್ಕೆ ನುಗ್ಗಿ ರಾಜ್ಯಪಾಲರನ್ನು ಓಡಿಸುತ್ತೇವೆ ಎನ್ನುವ ಮಾತನ್ನು ಆಡಿದ್ದಾರೆ. ಇಂತಹ ಮಾತನ್ನ ಕೇಳಿದರೆ ಬಹುಶಃ ಅವರಿಗೆ ಪಾಕಿಸ್ತಾನ ಉಗ್ರರ ಜೊತೆ ನಂಟಿದೆ ಎಂಬ ಅನುಮಾನ ಹುಟ್ಟುತ್ತಿದೆ. ಇಂತಹ ಬೆದರಿಕೆ ಮಾತುಗಳನ್ನು, ರಾಜ್ಯಪಾಲರ ವಿರುದ್ಧ ಯಾರೆಲ್ಲಾ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೋ ಅದನ್ನು ಖಂಡಿಸಿ ನಾವಿಂದು ಪೊಲೀಸ್ ನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಿದ್ದೇವೆ. ಗೂಂಡಾಗಿರಿ ಮಾಡಿದವರನ್ನು ಕೂಡಲೇ ಬಂಧಿಸಬೇಕೆಂದು ಹೇಳಿದರು.
ಮನವಿ ಸಲ್ಲಿಸುವ ವೇಳೆ ವಿಧಾನಪರಿಷತ್ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಶ್ರೀ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯ ಉಪಾಧ್ಯಕ್ಷರು, ಮಾಜಿ ಸಚಿವರಾದ ಶ್ರೀ ಎನ್.ಮಹೇಶ್, ಮಾಜಿ ಸಂಸದರಾದ ಡಾ.ಉಮೇಶ್ ಜಾಧವ್, ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ಶಾಸಕರಾದ ಶ್ರೀ ಸಿಮೆಂಟ್ ಮಂಜುನಾಥ್, ಮಾಜಿ ಸಂಸದರಾದ ಎಸ್‍ಟಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ಶ್ರೀ ಬಂಗಾರು ಹನುಮಂತು ಹಾಗೂ ಮತ್ತಿರರು ಭಾಗಿಯಾಗಿದ್ದರು.
Post a comment
Log in to write reviews