ಛತ್ತೀಸ್ ಗಢ : ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಖುಷಿಯಲ್ಲಿ ಬೆಂಬಲಿಗನೊಬ್ಬ ಬೆರಳನ್ನು ಕಾಳಿ ದೇವಿಗೆ ಅರ್ಪಿಸಿದ್ದಾನೆ.
ಬೆರಳು ಕತ್ತರಿಸಿಕೊಂಡ ವ್ಯಕ್ತಿ ಬಲರಾಮ್ ಪುರದ ದುರ್ಗೇಶ್ ಪಾಂಡೆ ಎಂದು ತಿಳಿದು ಬಂದಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಪಕ್ಷ, ಬಹುಮತ ಗಳಿಸಬೇಕೆಂದುಕೊಂಡಿದ್ದ ಆದರೆ ಕೊನೆ ಗಳಿಗೆಯಲ್ಲಿ ಸಂಖ್ಯಾ ಬಲ ಕಡಿಮೆಯಾಗಿದೆ. ದುರ್ಗೇಶ್ ಪಾಂಡೆ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಳಿ ದೇವಿಗೆ ತನ್ನ ಒಂದು ಬೆರಳನ್ನು ಅರ್ಪಿಸುವುದಾಗಿ ಹೇಳಿಕೊಂಡಿದ್ದ. ಅದರಂತೆ ಬಿಜೆಪಿ ನೇತೃತ್ವದ ಎನ ಡಿ ಎ ಬಹುಮತ ಪಡೆದುಕೊಂಡು ಜಯ ಸಾಧಿಸಿತು .ಇದರಿಂದ ಸಂತಸಗೊಂಡ ಬೆಂಬಲಿಗ ತನ್ನ ಪ್ರಾರ್ಥನೆಯಂತೆ ಕಾಳಿ ದೇವಿಗೆ ಬೆರಳನ್ನು ಅರ್ಪಿಸಿದ್ದಾನೆ.
ಬೆರಳನ್ನು ಕೊಯ್ದು ತೀವ್ರ ರಕ್ತ ಸಾವ್ರದಿಂದ ಅಸ್ವಸ್ಥಗೊಂಡಿದ್ದಾನೆ, ದುರ್ಗೇಶ್ ನನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.
ಅಪಾಯದಿಂದ ಪಾರಗಿ ಮಾತನಾಡಿದ ದುರ್ಗೇಶ್ ಚುನಾವಣಾ ಫಲಿತಾಂಶದ ವೇಳೆ ಬಿಜೆಪಿ ಸಂಖ್ಯಾಬಲ ಕಡಿಮೆಯಾಗುತ್ತಿರುವುದನ್ನು ಕಂಡು ಕಾಳಿ ದೇವಿಯನ್ನು ನೆನೆದು ಬಿಜೆಪಿ ಅಧಿಕಾರಕ್ಕೆ ಬಂದರೆ ನನ್ನ ಒಂದು ಬೆರಳನ್ನು ಅರ್ಪಿಸುವುದಾಗಿ ಪ್ರಾರ್ಥಿಸಿದೆ ಹಾಗಾಗಿ ಕೊನೆ ಕ್ಷಣದಲ್ಲಿ ಬಿಜೆಪಿ ಬಹುಮತ ಪಡುಯುತ್ತಿದ್ದಂತೆ ದೇವಸ್ಥಾನಕ್ಕೆ ಬಂದು ಬೆರಳನ್ನು ಅರ್ಪಿಸಿದೆ ಎಂದು ಹೇಳಿಕೊಂಡಿದ್ದಾನೆ.
Post a comment
Log in to write reviews