ಬಾಲಿವುಡ್ ನಟಿ ತಮನ್ನಾ ಭಾಟಿಯಾಗೆ ಸಂಕಷ್ಟ ಎದುರಾಗಿದ್ದು, ಹೆಚ್ಪಿಝಡ್ ಆ್ಯಪ್ ಹಗರಣದಲ್ಲಿ ತಮನ್ನಾ ಭಾಟಿಯಾ ಅವರ ಹೆಸರು ತಣುಕು ಹಾಕಿಕೊಂಡಿದೆ. ಈ ಕೇಸ್ನಲ್ಲಿ ತಮನ್ನಾ ಅವರನ್ನು ಆರೋಪಿಯಾಗಿ ವಿಚಾರಣೆ ನಡೆಸಿಲ್ಲ. ಬದಲಿಗೆ, ಅವರು ಈ ಆ್ಯಪ್ ಪ್ರಚಾರ ಮಾಡಿದ್ದಕ್ಕಾಗಿ ತನಿಖೆ ಎದುರಿಸುವಂತಾಗಿದೆ. ಈ ಬೆನ್ನಲ್ಲೇ ಅವರು ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ನಟಿ ತಮನ್ನಾ ಭಾಟಿಯಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಇದರ ವಿಚಾರಣೆ ಬಳಿಕ ಅವರು ಗುವಾಹಟಿಯ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿದ್ದಾರೆ.
Post a comment
Log in to write reviews