ನವದೆಹಲಿ: ಒಂದು ವಾರದಲ್ಲಿ 35ಕ್ಕೂ ಹೆಚ್ಚು ವಿಮಾನಗಳಿಗೆ ಬೆದರಿಕೆ ಕರೆ. ಕಳೆದ 24 ಗಂಟೆಗಳಲ್ಲಿ 3 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿದೆ.
ಬೆಂಗಳೂರಿಂದ ಮುಂಬೈಗೆ ಹೊರಟಿದ್ದ ಫ್ಲೈಟ್‌ಗೂ ಥ್ರೆಟ್ ಕಾಲ್ ಬಂದ ಕಾರಣ ಶುಕ್ರವಾರ ಬೆಂಗಳೂರಿನಿಂದ ಮುಂಬೈಗೆ ಹೊರಡಲು ಸಿದ್ಧವಾಗಿದ್ದ ಆಕಾಶ ಏರ್ ವಿಮಾನವನ್ನು ಸಂಪೂರ್ಣ ಪರಿಶೀಲನೆ ನಡೆಸಲಾಯಿತು. ನೆಟ್‌ವರ್ಕ್ ಆಪರೇಷನ್ ಕಂಟ್ರೋಲ್ ಒಪ್ಪಿಗೆ ನೀಡಿದ ಬಳಿಕ ಸಂಜೆ ಮುಂಬೈಗೆ ಹೊರಟಿತು.
ಸೋಷಿಯಲ್ ಮೀಡಿಯಾದಲ್ಲಿ ಬಾಂಬ್ ಬೆದರಿಕೆಯ ಕರೆ ಬಂದ ದೆಹಲಿಯಿಂದ ಲಂಡನ್‌ಗೆ ಹೊರಟಿದ್ದ ವಿಸ್ತಾರಾ ವಿಮಾನ ತಕ್ಷಣ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ, ವಿಮಾನವನ್ನು ಫ್ರಾಂಕ್‌ಫರ್ಟ್‌ಗೆ ಕಳುಹಿಸುವಂತೆ ನಿರ್ಧರಿ ವಿಮಾನವನ್ನು ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ಕಳುಹಿಸಿ, ಬಳಿಕ ಅಲ್ಲಿಂದ ಲಂಡನ್‌ಗೆ ಕಳುಹಿಸಲಾಯಿತು. ಜೈಪುರ್‌ನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಇದರಿಂದಾಗಿ ಸ್ವಲ್ವ ಸಮಯದ ಬಳಿಕ ವಿಮಾನ ಟೇಕ್‌ಆಫ್ ಆಯಿತು. ಇಂದು ಬೆಳಗ್ಗೆ 6:10ಕ್ಕೆ ಟೇಕ್ ಆಫ್ ಆಗಬೇಕಿದ್ದ ವಿಮಾನ ತಡವಾಗಿ 7:45ಕ್ಕೆ ಟೇಕ್ ಆಫ್ ಆಯಿತು. ಒಂದು ವಾರದಲ್ಲಿ ಸುಮಾರು 35 ವಿಮಾನಗಳು ಬೆದರಿಕೆಯ ಕರೆಗಳನ್ನು ಸ್ವೀಕರಿಸಿದ್ದು, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಅಧಿಕಾರಿಗಳು ಆ ಸಂದರ್ಭದಲ್ಲಿ ಭದ್ರತಾ ಪರಿಶೀಲನೆ ನಡೆಸಿ, ಕಠಿಣ ಕ್ರಮಗಳನ್ನು ಕೈಗೊಳ್ಳಲಾಯಿತು.
17 ವರ್ಷದ ಹುಡುಗನನ್ನು ಮುಂಬೈ ಪೊಲೀಸರು ಬುಧವಾರ ಕಸ್ಟಡಿಗೆ ತೆಗೆದುಕೊಂಡಿದೆ. ಹೆಚ್ಚಿನ ಕರೆಗಳನ್ನು ಅಪ್ರಾಪ್ತರು ಮತ್ತು ಕುಚೇಷ್ಟೆಗಾರರು ಮಾಡಿದ್ದಾರೆ ಎಂದು ಹೇಳಿದರು. ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಮೂರು ಸೇರಿದಂತೆ ಸೋಮವಾರ ನಾಲ್ಕು ವಿಮಾನಗಳಿಗೆ ಬೆದರಿಕೆ ಹಾಕಲಾಗಿದೆ ಎಂದು ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ಮಾತನಾಡಿದರು
ಭವಿಷ್ಯದಲ್ಲಿ ಇಂತಹ ಹುಸಿ ಬಾಂಬ್ ಕರೆಗಳು ನಡೆಯದಂತೆ ನೋಡಿಕೊಳ್ಳಲು ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲು ನಮ್ಮ ಇಲಾಖೆಯ ನಿಯಮಗಳು ತರಲು ಸೂಚಿಸಿದ್ದೇವೆ ಎಂದು ತಿಳಿಸಿದರು.
Post a comment
Log in to write reviews