ಬೆಂಗಳೂರು: ಇತ್ತೀಚಿಗೆ ಬೆಂಗಳೂರು ನಗರ ಸೇರಿದಂತೆ ದೇಶಾದಾದ್ಯಂತ ನಿರಂತರವಾಗಿ ಬಾಂಬ್ ಬೆದರಿಕೆ ಕರೆಗಳು, ಇ-ಮೇಲ್‌ಗಳು ಬರುತ್ತಲೇ ಇವೆ. ಈ ರೀತಿಯ ಬೆದರಿಕೆ ಕರೆಗಳು, ಇ-ಮೇಲ್ ಗಳು ಬೆಂಗಳೂರಿಗೆ ಹೊಸತೇನಲ್ಲ. ಈ ಘಟನೆ ಮತ್ತೆ ಮರುಕಳಿಸಿದೆ. ಇಂದು ಬೆಂಗಳೂರಿನ ಮೂರು ಪ್ರತಿಷ್ಟಿತ ಹೋಟೆಲ್ಗಳಿಗೆ ಬಾಂಬ್ ದಾಳಿಯ ಬೆದರಿಕೆಯ ಇ-ಮೇಲ್ ಗಳು ಬಂದಿದೆ. ಈ ಸುದ್ಧಿ ತಿಳಿಯುತ್ತಿದ್ದಂತೆ ಬೆಂಗಳೂರು ಪೊಲೀಸರು ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಹೋಟೆಲ್‌ಗಳಿಗೆ ದೌಡಾಯಿಸಿ ಬಂದು ಹೋಟೆಲ್ ಗಳ ಮೂಲೆ ಮೂಲೆ ಪರಿಶೀಲನೆ ಮಾಡಿಸಿದ್ದಾರೆ. ಬಾಂಬ್ ಬೆದರಿಕೆ ಇ-ಮೇಲ್ ಬಂದಿರುವ ಬಗ್ಗೆ ಆಗ್ನೇಯ ವಿಭಾಗದ ಡಿಸಿಪಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಇನ್ನು ಸಾರ್ವಜನಿಕರು ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹಾಗೆ ಇನ್ನೊಬ್ಬರು ಇದು ಯಾಕೆ ಈಗ ದೇಶಾದ್ಯಂತ ಬಾಂಬ್ ಬೆದರಿಕೆ ಕರೆಗಳು ಹೆಚ್ಚಾಗುತ್ತಿವೆ ಎಂದು ಪ್ರಶ್ನಿಸಿದ್ದಾರೆ. ಬುಧವಾರ ದೆಹಲಿಯ ಉತ್ತರ ಬ್ಲಾಕ್‌ನಲ್ಲಿರುವ ಕೇಂದ್ರ ಗೃಹ ಸಚಿವಾಲಯದ ಕಚೇರಿಗೂ ಬಾಂಬ್ ದಾಳಿ ಬೆದರಿಕೆ ಕರೆ ಬಂದಿತ್ತು. ಬೆದರಿಕೆ ಕರೆ ಬರುತ್ತಿದ್ದಂತೆ ಅಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು ಬುಧವಾರ ಮಧ್ಯಾಹ್ನ ಮೂರು ಮೂವತ್ತರ ಹೊತ್ತಿಗೆ ಸಚಿವಾಲಯದ ಕಚೇರಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ದೆಹಲಿ ಉತ್ತರ ಬ್ಲಾಕ್ ನ ಗೃಹ ಸಚಿವಾಲಯದ ಕಚೇರಿ ಬಳಿ, ಭದ್ರತೆ ನಿಯೋಜಿಸಲ್ಪಟ್ಟಿದ್ದ ಅಧಿಕಾರಿ ಒಬ್ಬರ ಮೇಲೆ ಬಾಂಬ್ ದಾಳಿ ಬೆದರಿಕೆ ಸಂದೇಶ ಬಂದಿದೆ ಅವರನ್ನ ತಕ್ಷಣವೇ ಅಲರ್ಟ್ ಮಾಡಿದೆ.
Post a comment
Log in to write reviews