ನವದೆಹಲಿ: ದೇಶಾದ್ಯಂತ 7 ರಾಜ್ಯಗಳಲ್ಲಿ ಖಾಲಿ ಇರುವ 13 ವಿಧಾನಸಭಾ ಕ್ಷೇತ್ರಗಳಿಗೆ ಇಂದು (ಜುಲೈ 10)ರಂದು ಉಪಚುನಾವಣೆ ನಡೆಯುತ್ತಿದೆ.
ಈಗಾಗಲೇ ಈ ಎಲ್ಲಾ ಕ್ಷೇತ್ರಗಳ ಮತದಾನ ಆರಂಭಗೊಂಡಿದ್ದು, ಚುನಾವಣಾ ಫಲಿತಾಂಶ ಜುಲೈ 13 ರಂದು ಬರಲಿದೆ. ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳ ʼಇಂಡಿಯಾʼ ಮೈತ್ರಿಕೂಟದ ಉತ್ತಮ ಪ್ರದರ್ಶನದ ನಂತರ, ಆಡಳಿತಾರೂಢ ಎನ್‌ಡಿಎ ಈ ಚುನಾವಣೆಯಲ್ಲಿ ಪ್ರತಿಪಕ್ಷಗಳಿಂದ ಕಠಿಣ ಹೋರಾಟವನ್ನು ಎದುರಿಸುವ ನಿರೀಕ್ಷೆಯಿದೆ.
ಯಾವ್ಯಾವ ರಾಜ್ಯಗಳಿಗೆ ಉಪಚುನಾವಣೆ?
ಬಿಹಾರದ ರುಪೌಲಿ, ಪಶ್ಚಿಮ ಬಂಗಾಳದ ರಾಯಗಂಜ್, ರಣಘಾಟ್ ದಕ್ಷಿಣ, ಬಗ್ಡಾ, ಮಾಣಿಕ್ತಾಲಾ, ತಮಿಳುನಾಡಿನ ವಿಕ್ರವಾಂಡಿ, ಮಧ್ಯಪ್ರದೇಶದ ಅಮರವಾಡ, ಉತ್ತರಾಖಂಡದ ಬದರಿನಾಥ್, ಮಂಗಲೌರ್, ಪಂಜಾಬ್‌ನ ಜಲಂಧರ್ ಪಶ್ಚಿಮ, ಡೆಹ್ರಾ, ಹಮೀರ್‌ಪುರ, ನಲಘಡದಲ್ಲಿ ಇಂದು ಮತದಾನ ನಡೆಯಲಿದೆ.
Post a comment
Log in to write reviews