ಬಿಜೆಪಿಗೆ ಓಟ್ ಕೊಡಿ, ನನ್ನ ತಪ್ಪಿನ ಅರಿವಾಗಿದೆ ಎಂದು ಹೇಳಿದ ರೀತಿ ನನ್ನ ಹೆಸರಿನಲ್ಲಿ ಫೇಕ್ ಪತ್ರಿಕಾ ಕಟಿಂಗ್ ಮಾಡಿ ಮತದಾರರನ್ನು ಸಂಸದ ಬಿ,ವೈ ರಾಘವೇಂದ್ರ ವಂಚಿಸಿದ್ದಾರೆ. ಈ ಪ್ರಕರಣಕ್ಕೆ ಸಂಭಂದಿಸಿದಂತೆ ಅವರನ್ನು ಬಂದಿಸಬೇಕು ಎಂದು ಶಿವಮೊಗ್ಗ ಲೊಕಸಭಾ ಪಕ್ಷೇತರ ಅಭ್ಯರ್ಥಿ ಕೆ, ಎಸ್ ಈಶ್ವರಪ್ಪ ಒತ್ತಾಯಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು. ನನ್ನ ಹೆಸರಿನಲ್ಲಿ ಫೇಕ್ ಪತ್ರಿಕಾ ಕಟಿಂಗ್ ಮತ್ತು ವಿಡಿಯೋ ಕಟಿಂಗ್ ಹರಿಬಿಟ್ಟು ಮತದಾರರನ್ನು ವಂಚಿಸಿದ ಸಂಸದ ಬಿ,ವೈ ರಾಘವೇಂದ್ರ ಅವರನ್ನು ಬಂದಿಸಬೇಕೆಂದರು. ನಾನು ಹಿಂದೆ ಬಿಜೆಪಿಯಲ್ಲಿ ಇದ್ದಾಗ ನೀಡಿದ್ದ ಹೇಳಿಕೆಯ ಫೋಟೊಗಳನ್ನ ಈಗ ಮಿಸ್ ಯೂಸ್ ಮಾಡಿದ್ದಾರೆ. ಅವರು ಸೋಲುವ ಭಯದಿಂದ ಈ ರೀತಿ ಮಾಡುತ್ತಿದ್ದಾರೆ ಎಂದರು. ಹಾಗೆಯೇ ಬಿಜೆಪಿಯಲ್ಲಿ ರಾಜಕೀಯ ಶುದ್ಧೀಕರಣ ಆಗಬೇಕು ಅಪ್ಪ ಮಕ್ಕಳಿಂದ ಪಕ್ಷ ಹೊರಗೆ ಬರಬೇಕು ಸೋನಿಯಾಗಾಂಧಿ ಅವರ ಪರಿವಾರದಿಂದ ಕಾಂಗ್ರೆಸ್ ಹೊರಬರಬೇಕು ಎಂದು ಹೇಳ್ತಿದ್ವಿ ಆದರೆ ಈಗ ಅದೇ ರೀತಿ ಬಿಜೆಪಿ ಕೂಡ ಶುದ್ಧಿ ಆಗಬೇಕು ಎಂದು ಈಶ್ವರಪ್ಪ ಕುಟುಂಬ ರಾಜಕಾರಣದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಪ್ರಜ್ವಲ್ ಪ್ರಕರಣದ ಬಗ್ಗೆ ಮಾತನಾಡಿದ ಅವರು ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಮಾತಾಡಲು ಅಸಹ್ಯವಾಗುತ್ತದೆ. ಹೆಣ್ಣನ್ನ ಬಳಸಿ ರಾಜಕೀಯ ಮಾಡೋನು ಅಯೋಗ್ಯ ಈ ಪ್ರಕರಣವನ್ನು ಸಿಬಿಐ ಗೆ ಕೊಡಬೇಕು. ಈ ಪ್ರಕರಣವನ್ನು ಹೊರತಂದ ದೇವೇರಾಜೇಗೌಡ ಅವರನ್ನೇ ಅರೆಸ್ಟ್ ಮಾಡಿದ್ದಾರೆ ಎಂದರು.
Post a comment
Log in to write reviews