ಟಾಪ್ 10 ನ್ಯೂಸ್
ರಾಜ್ಯದಲ್ಲಿ 4 ವರ್ಷದ ಡಿಗ್ರಿ ಕೋರ್ಸ್ ರದ್ದು : 3 ವರ್ಷದ ಕೋರ್ಸ್ ಮರು ಜಾರಿ
ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಮೂರು ವರ್ಷಗಳ 'ಪದವಿ' ಕಲಿಕೆ ಪದ್ಧತಿ ಮರು ಜಾರಿಗೆ ಬರಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಮೂರು ವರ್ಷದ ಡಿಗ್ರಿ ಕೋರ್ಸ್ ಕಲಿಕೆಯನ್ನು ಅಳವಡಿಸುವಂತೆ ರಾಜ್ಯ ಸರ್ಕಾರ ಮೇ 8ರಂದು ಆದೇಶ ಹೊರಡಿಸಿದೆ.
ರಾಜ್ಯ ಶಿಕ್ಷಣ ನೀತಿ (ಎಸ್ಇಪಿ) ಪ್ರಕಾರ 4 ವರ್ಷದ ಡಿಗ್ರಿ ಕೋರ್ಸ್ಗಳನ್ನು ವಾಪಸ್ ಪಡೆಯಲಾಗಿದೆ. ಬದಲಿಗೆ ಈ ಹಿಂದೆ ಇದ್ದಂತೆ 3 ವರ್ಷದ ಪದವಿ ಕೋರ್ಸ್ ಅನುಷ್ಠಾನಕ್ಕೆ ತರಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಈಗಾಗಲೇ ಎನ್ಇಪಿ ಪ್ರಕಾರ ನಾಲ್ಕು ವರ್ಷಗಳ ಪದವಿ ತರಗತಿಗೆ ಪ್ರವೇಶಾತಿ ಮಾಡಿಕೊಂಡು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು 4 ವರ್ಷದ ಕೋರ್ಸ್ ಪೂರ್ಣಗೊಳ್ಳುವವರೆಗೆ ಅಭ್ಯಾಸ ಮುಂದುವರಿಸಬಹುದಾಗಿದೆ. ಆದರೆ ಈ ಶೈಕ್ಷಣಿಕ ವರ್ಷದಿಂದ ಪ್ರವೇಶಾತಿ ಪಡೆಯುವವರಿಗೆ ಮೂರು ವರ್ಷದ ಕೋರ್ಸ್ ಅನ್ವಯವಾಗಲಿದೆ.
Tags:
- India News
- Kannada News
- degree
- degrees
- degree courses
- college degrees
- bachelors degree
- degree course
- free computer science degree
- computer science degree
- open source cs degree
- best degree course
- #degree courses
- the open source cs degree
- degree course with placement
- four year degree courses
- courses after degree
- open source computer science degree
- pg courses after degree
- free courses
Post a comment
Log in to write reviews