ಹೈದರಾಬಾದ್: ಅಮರಾವತಿಯಲ್ಲೇ ಆಂಧ್ರದ ಹೊಸ ರಾಜಧಾನಿ ನಿರ್ಮಾಣ ಮಾಡಲು ಚಂದ್ರಬಾಬು ನಾಯ್ಡು ಮುಂದಾಗಿದ್ದಾರೆ.
ಆಂಧ್ರಪ್ರದೇಶದಲ್ಲಿ ಮತ್ತೆ ಟಿಡಿಪಿ ಅಧಿಕಾರದ ಗದ್ದುಗೆ ಎರುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಕನಸಿನ ಕೂಸಾದ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ ಚಂದ್ರಬಾಬು ನಾಯ್ಡು ಮುಂದಾಗಿದ್ದಾರೆ. ಹೀಗಾಗಿ ಅಮರಾವತಿಯಲ್ಲಿ ಭೂಮಿಯ ಬೆಲೆ ಗಗನಕ್ಕೇರುತ್ತಿದೆ. ಕಳೆದ ಐದು ವರ್ಷಗಳಿಂದ ಅಮರಾವತಿಯಲ್ಲಿ ಭೂಮಿಯನ್ನು ಖರೀದಿ ಮಾಡುವವರೇ ಇರಲಿಲ್ಲ ಆದರೆ ಜೂನ್ 4 ರ ಫಲಿತಾಂಶದ ಬಳಿಕ ಭೂಮಿಯ ಬೆಲೆ ಶೇ.50 ರಿಂದ ನೂರರಷ್ಟು ಏರಿಕೆ ಆದರೂ ಜನರಾರು ಭೂಮಿ ಮಾರುತ್ತಿಲ್ಲ.
ಆಂಧ್ರಪ್ರದೇಶದ ವಿಜಯವಾಡ- ಗುಂಟೂರು ಮಧ್ಯೆ 30 ಸಾವಿರ ಎಕರೆ ಜಾಗದಲ್ಲಿ ಹೊಸ ರಾಜಧಾನಿ ಅಮರಾವತಿ ನಿರ್ಮಾಣವಾಗುತ್ತಿದೆ 2015 ರಲ್ಲೇ ಪ್ರಧಾನಿ ನರೇಂದ್ರ ಮೋದಿಯಿಂದ ಹೊಸ ರಾಜಧಾನಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಯಾಗಿತ್ತು ಆದರೆ 2019 ರಲ್ಲಿ ಅಧಿಕಾರಕ್ಕೆ ಬಂದ ಜಗನ್ ಮೋಹನ್ ರೆಡ್ಡಿಯಿಂದ ಅಮರಾವತಿಯಲ್ಲಿ ರಾಜಧಾನಿ ನಿರ್ಮಾಣಕ್ಕೆ ಎಳ್ಳು ನೀರು ಬಿಡಲಾಗಿತ್ತು ಇದರಿಂದ ಅಮರಾವತಿಯಲ್ಲಿ ಭೂಮಿಯ ಬೆಲೆ ಶೇ.60-75 ರಷ್ಟು ಕುಸಿತಗೂಂಡು ಚದರ ಗಜಕ್ಕೆ 9 ಸಾವಿರ ರೂಪಾಯಿಯಿಂದ 18 ಸಾವಿರ ಬೆಲೆ ಗೆ ಭೂಮಿ ದೊರಕುತ್ತಿತ್ತು ಆದರೆ ಈಗ ಒಂದು ವಾರದಿಂದ ಅಮರಾವತಿ ಭೂಮಿಯ ಬೆಲೆ ಚದರ ಗಜಕ್ಕೆ 30 ಸಾವಿರದಿಂದ 60 ಸಾವಿರ ರೂಪಾಯಿಗೆ ಏರಿಕೆಯಗಿದೆ.
ರಾಜ್ಯಧಾನಿ ನಿರ್ಮಾಣಕ್ಕೆ 30,000 ಎಕರೆ ಅಷ್ಟು ಭೂಮಿಯನ್ನ ಸ್ವಾಧೀನಕ್ಕೆ ತೆಗೆದುಕೊಂಡು ಈ ಹಿಂದೆ ೧೦ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದ ಟಿಡಿಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಅಮರಾವತಿ ರಾಜಧಾನಿ ನಿರ್ಮಾಣ ಪುನಂ ಚಾಲನೆ ಕೈಗೊಳ್ಳಲಾಗುವುದು ಎಂದು ಚಂದ್ರಬಾಬು ನಾಯ್ಡು ಹೇಳಿದ್ರು ಹೀಗಾಗಿ ಅಮರಾವತಿಯ ಭೂಮಿಯ ಬೆಲೆ ಚಿನ್ನದ ಬೆಲೆಗಿಂತ ಹೆಚ್ಚು ಏರಿಕೆ ಆಗುತ್ತಿದೆ.
Post a comment
Log in to write reviews