ದೆಹಲಿ: ಹೆಚ್ಚಿನ ನೀರು ಬಿಡುಗಡೆ ಮಾಡುವಂತೆ ಕೋರಿ ತಮಿಳುನಾಡು ಸಲ್ಲಿಸಿದ್ದ ಮನವಿಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿ ತಿರಸ್ಕರಿಸಿದೆ.
ಸಿಡಬ್ಲ್ಯೂಆರ್‌ಸಿ ಅಧ್ಯಕ್ಷ ವಿನೀತ್ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಾನ್ಸೂನ್ ಇನ್ನೂ ತೀವ್ರಗೊಂಡಿಲ್ಲ. ನದಿ ಕೂಡ ತುಂಬಿಲ್ಲ ಎಂದು ಹೇಳಿದ್ದಾರೆ.
ಜೂನ್ 1 ರಿಂದ 11 ರ ಅವಧಿಯಲ್ಲಿ ಕರ್ನಾಟಕದ ನಾಲ್ಕು ಕಾವೇರಿ ಜಲಾನಯನ ಜಲಾಶಯಗಳಲ್ಲಿ ನಿವ್ವಳ ಒಳಹರಿವು ಸುಮಾರು 1.70 ಟಿಎಂಸಿ ಅಡಿಗಳಷ್ಟಿತ್ತು ಆದರೆ ಈಗ ಕಡಿಮೆಯಾಗಿದೆ. ಕಾವೇರಿ ನದಿ ಸ್ವಲ್ಪ ಮಟ್ಟಿಗೆ ಭರ್ತಿಯಾಗುವವರೆಗೆ ಕೆಆರ್‌ಎಸ್ ಮತ್ತು ಕಬಿನಿಯಿಂದ ಯಾವುದೇ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಸಿಡಬ್ಲ್ಯೂಆರ್‌ಸಿ ಅಭಿಪ್ರಾಯಪಟ್ಟಿದೆ.
ಜೂನ್ ನಲ್ಲಿ ಕರ್ನಾಟಕದಿಂದ 9 ಟಿಎಂಸಿ ಅಡಿ ನೀರು ಬಿಡುವಂತೆ ತಮಿಳುನಾಡು ಸಭೆಯಲ್ಲಿ ಒತ್ತಾಯಿಸಿತ್ತು. ಆದರೆ, ಕಳೆದ 30 ವರ್ಷಗಳ ಸರಾಸರಿಗೆ ಹೋಲಿಸಿದರೆ ಜೂನ್ 1 ರಿಂದ 14 ರವರೆಗೆ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಗೆ ಒಳಹರಿವು ಶೇಕಡಾ 30 ರಷ್ಟು ಕುಗ್ಗಿದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ.
Post a comment
Log in to write reviews