ಮೈಸೂರು: ರಾಜ್ಯದ ಮೂರು ಸಮುದಾಯಕ್ಕೆ ಮಾತ್ರ ಕೇಂದ್ರದಲ್ಲಿ ಮಂತ್ರಿ ಸ್ಥಾನ ನೀಡಲಾಗಿದ್ದು, ಉಳಿದ ಸಮುದಾಯಕ್ಕೆ ತಾರತಮ್ಯ ಎಸಗಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಐವರನ್ನು ಮಂತ್ರಿ ಸ್ಥಾನ ನೀಡಲಾಗಿದೆ.ಇದರಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಪರಿಶಿಷ್ಟ ಜಾತಿ /ಪಂಗಡ, ಹಿಂದುಳಿದ, ಅಲ್ಪಸಂಖ್ಯಾತರಿಗೆ ಮಂತ್ರಿ ಮಂಡಲದಲ್ಲಿ ಅವಕಾಶ ಸಿಕ್ಕಿಲ್ಲ. ಆದರು 71 ಸ್ಥಾನದಲ್ಲಿ 27 ಹಿಂದುಳಿದ ಹಾಗೂ 10 ಪರಿಶಿಷ್ಟರಿದ್ದಾರೆ ಎಂದು ಹೇಳುತ್ತಾರೆ.
ಬ್ರಾಹ್ಮಣ ಸಮುದಾಯಕ್ಕೆ ಉನ್ನತ ಮಟ್ಟದ ಖಾತೆ ಹಂಚಿಕೆ ಮಾಡಲಾಗಿದೆ. 19 ಖಾತೆ ಒಂದೇ ಕೋಮಿಗೆ ನೀಡಲಾಗಿದೆ. ಇತರೆ ಸಣ್ಣಪುಟ್ಟ ಸಮುದಾಯದ ಜನರು ನಿಮಗೆ ಮತ ನೀಡಲ್ಲದೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿ ಹೋದ ಕಡೆಯಲ್ಲೆಲ್ಲ ರಾಹುಲ್ ಗಾಂಧಿ ಅವರನ್ನು ಕುಟುಂಬ ರಾಜಕಾರಣ ಅಂತ ಕಾಲೆಳುತ್ತಿದ್ದರು. ಆದರೆ ಬಿಜೆಪಿ ಸರ್ಕಾರದಲ್ಲೇ 11 ಸಂಸದರು ಕುಟುಂಬ ರಾಜಕಾರಣದಿಂದಲೇ ಬಂದಿದ್ದಾರೆ ಎಂದರು.
ಸ್ಯಾಡಿಸ್ಟ್ ಎಂದು ನಾನು ಮತದಾರರಿಗೆ ಹೇಳಿಲ್ಲ. ಸ್ಯಾಡಿಸ್ಟ್ ನೇಚರ್ ಆರಂಭವಾಗಿದೆ ಅಂತ ಹೇಳಿದ್ದೆ. ಅದನ್ನ ಮತದಾರರನ್ನ ಸ್ಯಾಡಿಸ್ಟ್ ಅಂತ ಹೇಳಿದ್ದೇನೆ ಎಂದು ನನ್ನ ಬಗ್ಗೆ ಅವರು ಅಪ ಪ್ರಚಾರ ಮಾಡಿದ್ದಾರೆ. ಗ್ಯಾರಂಟಿ ಸ್ಕೀಮ್ ಗಳನ್ನ ನಿಲ್ಲಿಸಿ ಅಂತ ನಾನು ಎಲ್ಲೂ ಹೇಳಲಿಲ್ಲ.
ಅದರಲ್ಲಿರುವ ಕೆಲವು ನ್ಯೂನತೆ ಸರಿಪಡಿಸಬೇಕು ಎಂದು ಹೇಳಿದ್ದೆ ಎಂದರು.
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿಲ್ಲ. ಬಿಜೆಪಿಯವರು ಸಹಿಸಲಾರದೆ ಈ ರೀತಿ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಆದ ಕೊಲೆ ಸುಲಿಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿಲ್ಲ ಎಂದು ಅಂಕಿ ಅಂಶ ಬಿಚ್ಚಿಟ್ಟರು.
ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದಾರೆ. ಅವರು ರಾಜ್ಯಕ್ಕೆ ಕಾವೇರಿ ವಿಚಾರದಲ್ಲಿ ಆಗಿರುವ ಅನ್ಯಾಯ, ಭದ್ರಾವತಿ ಉಕ್ಕಿನ ಕಾರ್ಖಾನೆ ಸಮಸ್ಯೆ, ದೇಶದಲ್ಲಿ ಉಕ್ಕಿನ ಕೈಗಾರಿಕೆಗಳ ಸಮಸ್ಯೆ, ಮೇಕೆದಾಟು,ಮಹಾದಾಯಿ ಸಮಸ್ಯೆ ಬಗೆಹರಿಸುತ್ತಾರೆ ಎಂದು ಪ್ರಶ್ನೆ ಮಾಡಿದರು.
Post a comment
Log in to write reviews