ಬಿಗ್ ಬಾಸ್ ಸೀಸನ್ 11ರ ಈಗಾಗಲೇ 2 ವಾರಗಳನ್ನು ಮುಗಿಸಿದ್ದು 3ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಟಾಸ್ಕ್ಗಳಲ್ಲಿ ಗೆಲ್ಲೋದಕ್ಕಿಂತ ಸೀಸನ್ 11ರ ಸ್ಪರ್ಧಿಗಳು ಮಾತಿನ ಯುದ್ಧದಲ್ಲಿ ಗೆಲ್ಲೋ ಪಣತೊಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಬಿರುಗಾಳಿಯೇ ಸೃಷ್ಟಿಯಾಗಿದೆ. ಇಷ್ಟು ದಿನ ಕೋಪ, ತಾಪದಲ್ಲಿದ್ದ ಸ್ಪರ್ಧಿಗಳು ಈಗ ನೀನಾ? ನಾನಾ? ಅನ್ನೋ ಸಮರಕ್ಕೆ ಇಳಿದಿದ್ದಾರೆ.
ಜಗದೀಶ್ ಅವರಿಗೂ ಚೈತ್ರಾಗೂ ವಾದ ನಡೆದಿದ್ದು, ಆಕೆ ಮೇಲೆ 28 ಕೇಸ್ಗಳಿವೆ ಎಂದು ಜಗದೀಶ್ ಅವರು ಗುಡುಗಿದ್ದಾರೆ. ಲಾಯರ್ ಜಗದೀಶ್ ಅವರ ಬಾಯಲ್ಲಿ ಕೇಸ್ಗಳ ವಿಚಾರ ಹೊರ ಬಂದಿದ್ದಕ್ಕೆ ಚೈತ್ರಾ ಅವರು ಕೆಂಡಾಮಂಡಲರಾಗಿದ್ದಾರೆ. ನನ್ನ ಎದುರು ನಿಲ್ಲೋ ತಾಕತ್ತು ಇಲ್ಲ ಥೂ.. ಎಂದಿರುವ ಚೈತ್ರಾ ಕೊಚ್ಚೆ ಮೇಲೆ ಕಲ್ಲು ಹಾಕಬಾರ್ದು ಅಷ್ಟೇ. ತಾಕತ್ತು ಇದ್ದವನು ಬಂದು ಎದುರುಗಡೆ ನಿಂತು ಮಾತಾಡಲಿ ಎಂದು ಖಡಕ್ ಸವಾಲು ಹಾಕಿದ್ದಾರೆ.
ನನ್ನ ಕೇಸ್ ಬಗ್ಗೆ ಯಾವನಿಗೂ ಮಾತನಾಡುವ ಯೋಗ್ಯತೆನೂ ಇಲ್ಲ. 50 ಅಲ್ಲ 100 ಕೇಸ್ ಹಾಕಿಸಿಕೊಳ್ಳುತ್ತೀನಿ. ಇವರಪ್ಪನಿಗೆ ಹೊಡೆದು ನಾನು ಕೇಸ್ ಹಾಕಿಸಿಕೊಂಡಿಲ್ಲ. ನನ್ನ ಕಣ್ಣೆದುರಿಗೆ ಬಂದು ನನ್ನ ಕೇಸ್ ಬಗ್ಗೆ ಮಾತನಾಡಲಿ ಎಂದು ಜಗದೀಶ್ಗೆ ಸವಾಲು ಹಾಕಿದ್ದಾರೆ. ಇವರಿಬ್ಬರ ಜಗಳದಲ್ಲಿ ಮನೆಯ ಉಳಿದ ಸದಸ್ಯರು ತಮ್ಮ ಪಾಡಿಗೆ ತಾವು ತೆರಳಿದ್ದಾರೆ. ಇಂದಿನ ಎಪಿಸೋಡ್ನಲ್ಲಿ ಚೈತ್ರಾ, ಜಗದೀಶ್ ಅವರ ಮಾತಿನ ಯುದ್ಧದ ಕಥೆ ಏನಾಗುತ್ತೆ ಅನ್ನೋ ಕ್ಲೈಮ್ಯಾಕ್ಸ್ ಗೊತ್ತಾಗಲಿದೆ.
Post a comment
Log in to write reviews