ಅಕೌಂಟೆಂಟ್ ಚಂದ್ರಶೇಖರ್ ಆತ್ಮಹತ್ಯೆ ಸಂಬಂಧಿಸಿದಂತೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆಂಚಪ್ಪ ಬಡಾವಣೆಯ ನಿವಾಸಿಯಾಗಿರುವ ಪತ್ನಿ ಕವಿತಾ ಚಂದ್ರಶೇಖರ್ ರವರು ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಜಿ.ಜಿ.ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ್ ದುಗ್ಗಣ್ಣನವರ್, ಯೂನಿಯನ್ ಬ್ಯಾಂಕ್ ಅಧಿಕಾರಿ ಶುಚಿಸ್ಮತಾ ರವುಲ್ ರಿಂದ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
306ರ ಅಡಿಯಲ್ಲಿ ವಿನೋಬನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 306 ಎಂದರೆ ವ್ಯಕ್ತಿ ಆತ್ಮಹತ್ಯೆ ಶರಣಾದರೆ, ಅಂತಹ ಆತ್ಮಹತ್ಯೆಯು ಕಮಿಷನ್ ಉತ್ತೇಜನದಿಂದಾಗಿ ಆಗಿದ್ದರೆ, ಅದನ್ನ ಈ ಸೆಕ್ಷನ್ ಆಧಾರದ ಮೇಲೆ ದೂರು ದಾಖಲಿಸಲಾಗುತ್ತದೆ.
ಪತ್ನಿ ಕವಿತಾ ಅವರ ಸಂಬಂಧಿಕರ ಅಂತ್ಯ ಸಂಸ್ಕಾರ ಕಾರ್ಯಕ್ಕೆ ಮಗನೊಂದಿಗೆ ಮಧ್ಯಾಹ್ನ 12-00 ಗಂಟೆಗೆ ಹೋಗಿದ್ದರು. ಆ ಸಮಯದಲ್ಲಿ ಚಂದ್ರಶೇಖರ್ ಒಬ್ಬರೆ ಮನೆಯಲ್ಲಿ ಇದ್ದರು. ತಾಯಿ ಮಗ ಸಂಜೆ 05-00 ವೇಳೆಗೆ ಅಂತ್ಯ ಸಂಸ್ಕಾರ ಕಾರ್ಯ ಮುಗಿಸಿಕೊಂಡು ವಾಪಾಸ್ ಮನೆಗೆ ಬಂದಿದ್ದಾರೆ. ಮನೆಗೆ ಬಂದಾಗ, ಚಂದ್ರಶೇಖರ್ ಬೆಡ್ ರೂಂ ಬಾಗಿಲು ಹಾಕಿತ್ತು, ಬಾಗಿಲು ತೆಗೆದು ನೋಡಿದಾಗ ಬೆಡ್ ರೂಂ ನ ಮೇಲಾವಣಿಯ ಕಬ್ಬಿಣದ ಹುಕ್ ಗೆ ಸೀರೆಯಿಂದ ನೇಣು ಹಾಕಿಕೊಂಡಿದ್ದರು. ಇದನ್ನು ನೋಡಿದ ತಾಯಿ ಮಗ ತಕ್ಷಣವೇ ಸಹೋದರ ಚೇತನ್ ಕುಮಾರ್ ರವರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ. ಕವಿತಾ ಸಹೋದರ ತಕ್ಷಣ ಬಂದು ನೋಡಿದಾಗ, ಮೃತ ಪಟ್ಟಿದ್ದು ದೃಢಪಟ್ಟಿದೆ.
ಚಂದ್ರಶೇಖರ್ ರವರ ಮೃತದೇಹದ ವೈದ್ಯಕೀಯ ಮರಣೋತ್ತರ ಪರೀಕ್ಷೆಯಾದ ನಂತರ ಮೆಗ್ರಾನ್ ಆಸ್ಪತ್ರೆಯಿಂದ ಮನೆಗೆ ತರಲಾಯಿತು. ಸುಮಾರು 10-45 ಗಂಟೆ ಸಮಯದಲ್ಲಿ. ಮನೆಯ ಹಾಲ್ ನಲ್ಲಿರುವ ಟಿ.ವಿ ಸ್ಟ್ಯಾಂಡ್ ಹಿಂಭಾಗದಲ್ಲಿ. ಒಂದು ನೋಟ್ ಬುಕ್ ಕವಿತಾರವರ ಕಣ್ಣಿಗೆ ಕಾಣಿಸಿದೆ. ಅದನ್ನು ತೆಗೆದು ನೋಡಿದಾಗ ಅದರಲ್ಲಿ. ಚಂದ್ರಶೇಖರ್ ಅವರ ಮರಣ ಹೇಳಿಕೆ ಪತ್ತೆಯಾಗಿದೆ. ಮರಣ ಹೇಳಿಕೆಯಲ್ಲಿ ಚಂದ್ರಶೇಖರ್ ಪಿ. ಆದ ನಾನು ಈ ದಿನ ಸ್ವ ಇಚ್ಛೆಯಿಂದ ನೇಣು ಬಿಗಿದುಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಕಾರಣರಾದವರ ಪಟ್ಟಿ ಈ ಕೆಳಗಿನಂತಿದೆ ಎಂದು ನಮೂದಿಸಲಾಗಿದೆ.
1. ಶ್ರೀ ಜೆಜಿ ಪದ್ಮನಾಭ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ನಿಯಮಿತ, ಖಾದಿ ಭವನ, ವಸಂತನಗರ, ಬೆಂಗಳೂರು.
2. ಪರಶುರಾಮ ಗ ದುರಗಣ್ಯ ವರ, ಲೆಕ್ಕಾಧಿಕಾರಿಗಳು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ, ಖಾದಿ ಭವನ, ವಸಂತನಗರ, ಬೆಂಗಳೂರು.
3. ಶ್ರೀಮತಿ ಶುಚಿಸ್ಮೃತಾ ರವುಲ್. ಮುಖ್ಯ ವ್ಯವಸ್ಥಾಪಕರು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ. ಎಂ.ಜಿ ರಸ್ತೆ ಶಾಖೆ ಬೆಂಗಳೂರುರವರುಗಳು ಕಾರಣರಾಗಿರುತ್ತಾರೆ ಎಂದು ಉಲ್ಲೇಖವಾಗಿದೆ.
ಹಾಗೂ ನಿಗಮದ ಪರಿಶಿಷ್ಟ ಪಂಗಡಗಳ ಅನುದಾನ ರೂ. 80 ರಿಂದ 85 ಕೋಟಿಗಳು ಅನ್ಯಾಯವಾಗಿ ನಿಯಮ ಬಾಹಿರವಾಗಿ ಲೂಟಿ ಮಾಡಿರುವುದು ಕಂಡುಬರುತ್ತದೆ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖವಾಗಿರುವುದಾಗಿ. ಪತ್ನಿ ಕವಿತಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಇದೇ ವಿಚಾರಗಳನ್ನ ದಾಖಲಿಸಿದ್ದಾರೆ. ಪತಿ ಚಂದ್ರಶೇಖರ್‌ರವರಿಗೆ ಕರ್ತವ್ಯದಲ್ಲಿ ಒತ್ತಡ ಹೇರಿ ಅವರ ಸಾವಿಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕವಿತಾ ದೂರಿನಲ್ಲಿ ದಾಖಲಿಸಿದ್ದಾರೆ.
Post a comment
Log in to write reviews