ನವದೆಹಲಿ: ಲೋಕಸಭಾ ಕಲಾಪದಲ್ಲಿ ಸ್ಮೋಕ್ ಬಾಂಬ್ ಪ್ರಕರಣ ಸಂಬಂಧ ಆರೋಪಿ ಮೈಸೂರಿನ ಮನೋರಂಜನ್ ಸೇರಿ ಆರು ಮಂದಿ ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.
ದೆಹಲಿಯ ಸಂಸತ್ ಕಲಾಪಕ್ಕೆ 2023 ರ ಡಿಶಂಬರ್ 13 ರಂದು ಭದ್ರತಾ ಪಡೆಗಳ ಕಣ್ತಪ್ಪಿಸಿ ಬಣ್ಣದ ಬಾಂಬ್ ನ್ನು ಸ್ಫೋಟಿಸಿದ್ದ. ಈ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮೈಸೂರಿನ ಡಿ. ಮನೋರಂಜನ್ ಎಂಬಾತನನ್ನು ಬಂಧಿಸಲಾಗಿತ್ತು. ನಂತರ ಲಲಿತ್ ಝಾ, ಅಮೋಲ್ ಶಿಂಧೆ, ಮಹೇಶ್ ಕುಮಾವತ್, ಸಾಗರ್ ಶರ್ಮಾ ಹಾಗೂ ನೀಲಂ ಆಜಾದ್ ಎಂಬ ಆರೋಪಿಗಳು ಈ ಘಟನೆಯಲ್ಲಿ ಭಾಗಿಯಾಗಿರುವುದು ತಿಳಿದು ಬಂದಿತ್ತು. ಇವರ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಆರು ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಿ ಆರೋಪಿಗಳಿಗೆ ಜುಲೈ 15 ರವರಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸ್ಮೋಕ್ ಬಾಂಬ್ ವಿಚಾರ ಸಂಸತ್ ನ ಒಳಗೆ ಕೆಲಕಾಲ ಭಯದ ವಾತಾವರಣ ಸೃಷ್ಠಿಸಿತ್ತು. ಆರೋಪಿಗಳು ವೀಕ್ಷಕರ ಗ್ಯಾಲರಿ ಪಾಸ್ ಪಡೆದು ಒಳ ನುಸುಳಿ ಈ ಕೃತ್ಯವೆಸಗಿದ್ದರು. ಆಗ ಮೈಸೂರಿನ ಸಂಸದರಾಗಿದ್ದ ಪ್ರತಾಪ್ ಸಿಂಹ ಈ ಆರೋಪಿಗಳಿಗೆ ವೀಕ್ಷಕರಿಗೆ ನೀಡಲಾಗುವುದ ಪಾಸ್ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ಯುಎಪಿಎ ಕಾಯ್ದೆಅಡಿ ಪ್ರಕರಣ ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು ನಿರಂತರ ತಲಾಶ್ ನಡೆಸಿ, ಮನೋರಂಜನ್ ಕುಟುಂಬಸ್ಥರು, ಸ್ನೇಹಿತರ ವಿಚಾರಣೆ ನಡೆಸಿದ್ದರು. ಮನೆ, ಸ್ನೇಹಿತರ ಕಚೇರಿಗಳ ಶೋಧ ನಡೆಸಿ ಮಹತ್ವದ ದಾಖಲೆ ಸಂಗ್ರಹಿಸಿದ್ದರು.
Post a comment
Log in to write reviews