Samayanews.

Samayanews.

2024-12-23 11:19:46

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಚಾಂಗ್ - 6 : ಚಂದ್ರನ ಸ್ಪರ್ಶಿಸಲಿರುವ ಚೀನಾ ನೌಕೆ

ಚೀನಾ ಚಂದ್ರ ದೇವತೆ "ಚಾಂಗಾ" ಎಂಬ ಹೆಸರಿನೊಂದಿಗೆ ಕರೆಯಲ್ಪಟ್ಟ ಚಾಂಗಾ - 6   ನೌಕೆಯು ಭೂಮಿಗೆ ಅದೃಶವಾಗಿರುವ ಚಂದ್ರನ ಹಿಂಭಾಗದಿಂದ ಮಾದರಿಗಳನ್ನು ಸಂಗ್ರಹಿಸಿ ಹಿಂದಿರುಗಿಸುವ ಸಲುವಾಗಿ ನಿರ್ಮಿಸಲಾಗಿದೆ.

ಈ ಭಾಗದ ಪದರ ಮಾದರಿಯನ್ನು ಅಧ್ಯಯನ ಮಾಡುವುದರ ಮೂಲಕ ಭೂಮಿ-ಚಂದ್ರ ವ್ಯವಸ್ಥೆಯ ಮೂಲ ಮತ್ತು ವಿಕಾಸದ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸುತ್ತದೆ ಎಂದು ವಿಜ್ಞಾನಿಗಳು ಅಪೇಕ್ಷಿಸುತ್ತಿದ್ದಾರೆ.

ನೌಕೆಯ ಕಾರ್ಯಾಚರಣೆ ಒಟ್ಟಾರೆ 2 - 3 ತಿಂಗಳಾಗಲಿದ್ದು ಲಾಂಗ್ ಮಾರ್ಚ್ 5 ರಾಕೆಟ್ ಮೂಲಕ ಇಂದು (ಶುಕ್ರವಾರ) ಮುಂಜಾನೆ 5:27 ಕ್ಕೆ ದಕ್ಷಿಣ ಚೀನಾ ಪ್ರದೇಶದ ಹೈನನ್ ದ್ವೀಪದಿಂದ ಉಡಾವಣೆಯಾಗಿದೆ.

ಚೀನಾದಿಂದ ಚಂದ್ರನ ಈ ಅರ್ಧಭಾಗಕ್ಕೆ ಮೊದಲ ಭೇಟಿ 2019 ರಲ್ಲಿ ಚಾಂಗ್-4 ಮೂಲಕ ಆಗಿದ್ದು, ಇದು ಚಂದ್ರನ ವಾನ್ ಕರ್ಮನ್ ಕುಳಿಯನ್ನು ಸಂಶೋಧಿಸಲು ರೋವರ್ ಅನ್ನು ಒಳಗೊಂಡಿತ್ತು. 

ಒಂದು ವರ್ಷದ ನಂತರ, ಚಾಂಗ್-5 ಚಂದ್ರನ ಸಮೀಪದಿಂದ ಸುಮಾರು ನಾಲ್ಕು ಪೌಂಡ್ ರೆಗೊಲಿತ್ ಅನ್ನು ಸಂಗ್ರಹಿಸಿ ಭೂಮಿಗೆ ತಂದಿತು. ಹಾಗಾಗಿ ಈ ಯಾನದ ಮೂಲಕ ಚಂದ್ರನ ಇತರೇ ಮೇಲ್ಮೈ ಲಕ್ಷಣಗಳನ್ನು ಸಂಗ್ರಹಿಸಲು ಚೀನಾ ದೃಷ್ಟಿ ನೆಟ್ಟಿದೆ.

img
Author

Post a comment

No Reviews