ಮೈಸೂರು: ಸಿ ಎಂ ತವರು ಜಿಲ್ಲೆಯಾದ ವರುಣಾದಲ್ಲಿ ಕಾಲರ ರೋಗ ಕಾಣಿಸಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಅವರ ವರುಣ ಕ್ಷೇತ್ರದ ತಗಡೂರು ಗ್ರಾಮದಲ್ಲಿ ಹಲವರಿಗೆ ವಾಂತಿ-ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುಂಜಾಗೃತಾ ಕ್ರಮವಾಗಿ ಪರೀಕ್ಷೆ ನಡೆಸಿದೆ. ಒಂದು ವಾರದಿಂದ ಇಲಾಖೆ ಸತತವಾಗಿ ಪರೀಕ್ಷೆ ನಡೆಸುತಿದ್ದು ಸುಮಾರು 114 ಜನರನ್ನ ಪರೀಕ್ಷೆಗೊಳಪಡಿಸಿತ್ತು ಇದರಿಂದ ಮೂವರಲ್ಲಿ ಕಾಲರ ಇರುವುದು ದೃಡಪಟ್ಟಿದೆ. ಗ್ರಾಮಕ್ಕೆ ಡಿಎಚ್‍ಓ ಶಿವಕುಮಾರ್ ಸ್ವಾಮಿ ಒಳಗೊಂಡಂತೆ ಹಿರಿಯ ಆರೋಗ್ಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಲ್ಲಿನ ಜನ ಇಲ್ಲಿನ ಬೋರ್ ವೆಲ್ ನೀರನ್ನ ಉಪಯೊಗಿಸಿದ್ದರಿಂದ ಕಾಲರ ಬಂದಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಇದರಿಂದಾಗಿ ಗ್ರಾಮದ ನಾಲ್ಕು ಬೋರ್‍ವೆಲ್ ಗಳನ್ನ ತಾತ್ಕಾಲಿಕ ಮುಚ್ಚಲಾಗಿದೆ. ಹಾಗೂ ಆರೋಗ್ಯ ಅಧಿಕಾರಿಗಳು ನೀರಿನ ಸ್ಯಾಂಪಲ್ ಅನ್ನ ಪರೀಕ್ಷೆಗೆ ಕಳುಹಿಸಲಾಗಿದೆ. ಮುಂಜಾಗೃತ ಕ್ರಮವಾಗಿ ಗ್ರಾಮದ ಸಮುದಾಯ ಆಸ್ಪತ್ರೆಯಲ್ಲಿ 6 ಜನ ವೈದ್ಯರು, ಅಂಬುಲೆನ್ಸ್ ವಾಹನ ನಿಯೋಜನೆ ಮಾಡಿದ್ದಾರೆ.
Post a comment
Log in to write reviews