Samayanews.

Samayanews.

2024-12-24 12:38:55

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಭಾರತವನ್ನು ಹಾಡಿ ಹೊಗಳಿದ ಅಮೆರಿಕಾ ಮೂಲದ ಮಹಿಳೆ ಕ್ರಿಸ್ಟೇನಾ

ನವದೆಹಲಿ: ಅಮೆರಿಕಾದ ಮಹಿಳೆಯೊಬ್ಬಳು ಭಾರತದ ಬಗ್ಗೆ. ಇಲ್ಲಿನ ಬದುಕಿನ ಬಗ್ಗೆ ಮಾಡಿದ ವಿಡಿಯೋವೊಂದು ಈಗ ದೊಡ್ಡ ಸದ್ದು ಮಾಡುತ್ತಿದೆ.

ಬದುಕು ಅರಿಸಿಕೊಂಡು ಬಂದವರಿಗೆ ಎಂದೂ ಬೆನ್ನು ತೋರಿಸದ ಜಗತ್ತಿನ ಏಕೈಕ ರಾಷ್ಟ್ರ ಭಾರತ. ಜಗತ್ತಿನ ಮೂಲೆ ಮೂಲೆಯಲ್ಲಿಯೂ ಹಿಂಸೆಯನ್ನೇ ಅನುಭವಿಸಿದ ಯಹೂದಿಗಳು ನೆಮ್ಮದಿಯಾಗಿ ಬದುಕಿದ್ದು ಅಂದ್ರೆ ಅದು ಭಾರತದಲ್ಲಿ,

ಆದ್ರೆ ವಿಪರ್ಯಾಸ ಅಂದ್ರೆ ಇದೇ ದೇಶದ ಯುವಕರು ಬದುಕು ಅರಸಿಕೊಂಡು ಪರದೇಶಗಳಿಗೆ ಹೋಗುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿಯೇ ಹಣಕ್ಕಿಂತ ಇಲ್ಲಿ ಬದುಕು ಮುಖ್ಯ, ಜೀವನ ಮುಖ್ಯ ಅಮೆರಿಕಾದಲ್ಲಿ ಹಾಗಿಲ್ಲ ಎಂದು ಕ್ರಿಸ್ಟೇನಾ ಫಿಸ್ಚೆರ್ ಎನ್ನುವ ಮಹಿಳೆ ಮಾಡಿದ ವಿಡಿಯೋವೊಂದು ಈಗ ದೊಡ್ಡ ಸದ್ದು ಮಾಡುತ್ತಿದೆ.

ಕ್ರಿಸ್ಟೇನಾ ಫಿಸ್ಟೆರ್ 2017ರಲ್ಲಿ ಮೊದಲ ಬಾರಿಗೆ ತಮ್ಮ ಪತಿಯೊಂದಿಗೆ ಭಾರತಕ್ಕೆ ಭೇಟಿ ನೀಡುತ್ತಾರೆ. ಭಾರತದ ಬದುಕು. ಭಾರತದ ಸಂಸ್ಕೃತಿಗೆ ಜನರ ನಡುವಳಿಕೆಗೆ ಮಾರು ಹೋದ ಈ ಜೋಡಿ ಎರಡು ವರ್ಷಗಳ ಹಿಂದಷ್ಟೇ ಖಾಯಂ ಆಗಿ ಭಾರತಕ್ಕೆ ಬಂದು ನೆಲೆಸುತ್ತಾರೆ. ಮೂರು ಮಕ್ಕಳ ತಾಯಿಯಾಗಿರುವ ಕ್ರಿಸ್ಟೇನಾ ನಾನೇಕೆ ಯುಎಸ್​ ಬಿಟ್ಟು ಭಾರತಕ್ಕೆ ಬಂದೆ ಅಂತ ಒಂದು ವಿಡಿಯೋದಲ್ಲಿ ವಿವರಣೆ ನೀಡಿದ್ದಾರೆ. ಅದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು. ಭಾರತದ ಹಿರಿಮೆಯನ್ನು ಹಾಡಿ ಹೊಗಳಿದ ಕ್ರಿಸ್ಟೇನಾಗೆ ಜನರು ಸಲಾಂ ಎನ್ನುತ್ತಿದ್ದಾರೆ.

ವೈರಲ್ ವಿಡಿಯೋದಲ್ಲಿ ಕ್ರಿಸ್ಟೇನಾ ಅಮೆರಿಕಾದಲ್ಲಿ ಅತಿಯಾದ ವ್ಯಕ್ತಿವಾದ ಹಾಗೂ ಸಾಮಾಜಿಕ ಭಿನ್ನತೆ ಇದೆ. ಸಮುದಾಯ, ಸಂಸ್ಕೃತಿ ಹಾಗೂ ಬದುಕಿನ ಬಗ್ಗೆ ಒಂದು ಆಳವಾದ ಪ್ರಜ್ಞೆ ಆ ದೇಶದಲ್ಲಿ ನಮಗೆ ಕಾಣ ಸಿಗುವುದಿಲ್ಲ. ಆದ್ರೆ ಅದು ಭಾರತದಲ್ಲಿ ಉತ್ಕೃಷ್ಟ ಮಟ್ಟದಲ್ಲಿದೆ ಎಂದು ಹೇಳಿದ್ದಾರೆ. ಮುಂದೆ ಮಾತನಾಡಿದ ಕ್ರಿಸ್ಟೇನಾ, ಅಮೆರಿಕಾದಲ್ಲಿ ಬದುಕಿಗಿಂತ ಹಣ ಮುಖ್ಯ ಆದ್ರೆ ಭಾರತದಲ್ಲಿ ಹಣಕ್ಕಿಂತ ಬದುಕಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಎಂದು ಹೇಳಿದ್ದಾರೆ.

ನನ್ನ ಬಗ್ಗೆ ತಪ್ಪು ತಿಳಿದುಕೊಳ್ಳಬೇಡಿ ನಾನು ಅಮೆರಿಕಾವನ್ನು ಪ್ರೀತಿಸುತ್ತೇನೆ, ನಾನು ಹುಟ್ಟಿ ಬೆಳೆದಿದ್ದು ಅಲ್ಲಿಯೇ, ನನ್ನ ಕುಟುಂಬ ಅಲ್ಲಿಯೇ ಇದೆ, ಅದು ಅದ್ಭುತ ನೆಲ ಆದ್ರೆ ಪರಿಪೂರ್ಣವಲ್ಲ ಎಂದಿದ್ದಾರೆ. ಅದು ಅಲ್ಲದೇ ಅಮೆರಿಕಾದಲ್ಲಿ ಅನೇಕ ನೂನ್ಯತೆಗಳನ್ನು ಹೊಂದಿದೆ. ಅಮೆರಿಕಾ ಸದಾ ವ್ಯಕ್ತಿವಾದದ ಮೇಲೆ ನಿಂತಿರುವ ದೇಶ. ಸದಾ ತಮ್ಮ ಬಗ್ಗೆಯೇ ಯೋಚನೆ ಮಾಡಿಕೊಂಡು ಜನರು ಹೊರಗೆ ಬೀಳುತ್ತಾರೆ. ಮತ್ತೊಬ್ಬರಿಗೆ ಸಹಾಯ ಮಾಡುವುದನ್ನೇ ಅಲ್ಲಿಯ ಜನರಿಗೆ ಗೊತ್ತಿಲ್ಲ ಎಂದಿರುವ ಕ್ರಿಸ್ಟೇನಾ ಭಾರತದಲ್ಲಿ ಹಾಗಿಲ್ಲ ಇಲ್ಲಿ ಬದುಕನ್ನೂ ತೀವ್ರವಾಗಿ ಪ್ರೀತಿಸುತ್ತಾರೆ. ರಂಗು ತುಂಬಿದ ಬದುಕು, ಸಂಸ್ಕೃತಿ ಸಮುದಾಯ ಎಲ್ಲವೂ ಒಟ್ಟಿಗೆ ಸಾಗುವ ಪ್ರಜ್ಞೆಯೊಂದಿಗೆ ಬದುಕುತ್ತಾರೆ ಎಂದು ಕ್ರಿಸ್ಟೇನಾ ಹೇಳಿದ್ದಾರೆ.

ಅಮೆರಿಕಾದಲ್ಲಿ ಬದುಕಲು ಹಣವೊಂದೆ ಮುಖ್ಯ ಎಂಬ ಮಾನಸಿಕತೆಯಲ್ಲಿ ಜನರು ಬದುಕುತ್ತಾರೆ ಆದ್ರೆ ನಾನು ನಂಬುವ ಪ್ರಕಾರ ಹಣದಾಚೆ ಮತ್ತೊಂದು ಬದುಕಿದೆ. ಬದುಕನ್ನು ತೀವ್ರವಾಗಿ ಬದಕಲು ಹಣದಾಚೆ ಅನೇಕ ಕಾರಣಗಳು ಇವೆ ಎಂದು ಕ್ರಿಸ್ಟೇನಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಕ್ರಿಸ್ಟೇನಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಅವರು ಭಾರತದ ಮೇಲೆ ಇಟ್ಟಿದ್ದ ಪ್ರೀತಿಯನ್ನು ಕಂಡು ಜನರು ಭಾವುಕರಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

img
Author

Post a comment

No Reviews