ನವದೆಹಲಿ: ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗಳು ಮುಖ್ಯ ನ್ಯಾಯಮೂರ್ತಿಗಳು ರಾಜ್ಯ ಮತ್ತು ಕೇಂದ್ರದ ಸರ್ಕಾರಗಳ ಮುಖ್ಯಸ್ಥರನ್ನು ಭೇಟಿಯಾದರೆ ಏನೋ ಡೀಲ್ ನಡೆದಿದೆ ಎಂದರ್ಥವಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ.
ಈ ರೀತಿಯ ಭೇಟಿಗಳು ನ್ಯಾಯಾಂಗ ನಿರ್ಧಾರಗಳಿಗಿಂತ ಹೆಚ್ಚಾಗಿ ನ್ಯಾಯಾಂಗಕ್ಕೆ ಸಂಬಂಧಿಸಿದ ಮೂಲಸೌಕರ್ಯ ಸಮಸ್ಯೆಗಳ ಕುರಿತು ಕೇಂದ್ರೀಕರಿಸುತ್ತದೆ. ಈ ರೀತಿಯ ಚರ್ಚೆಗಳಿಂದ ನ್ಯಾಯಾಂಗ ವಿಷಯಗಳನ್ನು ಬದಿಗಿಡುವಷ್ಟು ಪ್ರಬುದ್ಧತೆ ನ್ಯಾಯಾಧೀಶರಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ನಮ್ಮ ಕರ್ತವ್ಯಗಳ ಕುರಿತು ನಮಗೆ ಅರಿವಿದೆ ಹಾಗೂ ರಾಜಕೀಯ ಕಾರ್ಯಗಳಿಗೆ ಸಂಬಂಧಿಸಿದ ಕರ್ತವ್ಯಗಳ ಬಗ್ಗೆ ಅವರಿಗೆ ತಿಳಿದಿದೆ. ರಾಜ್ಯಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದು ವಾಡಿಕೆ. ಹಾಗೆಯೇ ಇದು ಕೂಡ. ರಾಜಕೀಯದಲ್ಲಿಯೂ ಕೂಡ ನ್ಯಾಯಾಂಗಕ್ಕೆ ಹೆಚ್ಚಿನ ಗೌರವವಿದೆ. ನ್ಯಾಯಾಂಗ ಮತ್ತು ಸರ್ಕಾರದ ನಡುವೆ ಸುಗಮವಾಗಿ ಕಾರ್ಯಗಳು ಸಾಗಲು ಸಭೆಗಳು ಅಗತ್ಯವಾಗಿವೆ ಎಂದರು.
ನಾವು ರಾಜ್ಯದ ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸಬೇಕು. ಏಕೆಂದರೆ ಬಜೆಟ್ ಒದಗಿಸುವವರು ಅವರು. ನ್ಯಾಯಾಂಗಕ್ಕೆ ಬಜೆಟ್ ಒದಗಿಸುವವರು ಅವರೇ ವಿನಾ: ನ್ಯಾಯಾಧೀಶರಲ್ಲ.ನಾವು ಭೇಟಿಯಾಗದೇ ಪತ್ರಗಳ ಮೇಲೆ ಮಾತ್ರ ಅವಲಂಬಿತವಾಗಿದ್ದರೆ ನಮ್ಮ ಕೆಲಸವು ನಡೆಯುವುದಿಲ್ಲ ಎಂದು ಹೇಳಿದರು.
ನ.10ರಂದು ನಿವೃತ್ತಿ ಹೊಂದಲಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ದೆಹಲಿ ನಿವಾಸಕ್ಕೆ ಸೆಪ್ಟೆಂಬರ್‌ನಲ್ಲಿ ಗಣೇಶ ಪೂಜೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದರು. ಈ ಭೇಟಿಗೆ ಸಂಬಂಧಿಸಿದಂತೆ ವಿಪಕ್ಷಗಳು ಟೀಕೆ ವ್ಯಕ್ತಪಡಿಸಿದ್ದವು.
ವಿಪಕ್ಷಗಳ ಟೀಕೆ ಏನಿತ್ತು?
ಶಿವಸೇನೆ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ನಡುವಿನ ಜಗಳಕ್ಕೆ ಸಂಬಂಧಿಸಿದ ಪ್ರಕರಣದಿಂದ ಹಿಂದೆ ಸರಿಯುವಂತೆ ಡಿವೈ ಚಂದ್ರಚೂಡ್ ಅವರನ್ನು ಶಿವಸೇನಾ ನಾಯಕ ಸಂಜಯ್ ರಾವುತ್ ಕೇಳಿಕೊಂಡಿದ್ದರು.
ಗಣಪತಿ ಪೂಜೆಯ ವೈಯಕ್ತಿಕ ವಿಚಾರವನ್ನು ಎತ್ತಿಹಿಡಿದು, ಭಾರತದ ಮುಖ್ಯ ನ್ಯಾಯಮೂರ್ತಿ ಹಾಗೂ ಪ್ರಧಾನಿಯವರು ಉನ್ನತ ವ್ಯಕ್ತಿಗಳು. ಒಬ್ಬ ಹಾಲಿ ಸಿಜೆಐ ಮನೆಗೆ ಪ್ರಧಾನಿಯೊಬ್ಬರು ಭೇಟಿ ನೀಡುವುದು ಸರಿಯೇ? ಇದು ನ್ಯಾಯಾಂಗಕ್ಕೆ ಧಕ್ಕೆ ತಂದಹಾಗಲ್ಲವೇ? ಎಂದು ಕಿಡಿಕಾರಿದ್ದರು.
Post a comment
Log in to write reviews