ಚನ್ನಪಟ್ಟಣದಲ್ಲಿ ಸ್ಪರ್ಧೆ ವಿಚಾರ ಹೈಕಮಾಂಡ್ ನಾಯಕರಿಗೆ ಬಿಟ್ಟಿದ್ದು: ನಿಖಿಲ್ ಕುಮಾರಸ್ವಾಮಿ
ಬೆಂಗಳೂರು: ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ, ದೇಶದ ಗೌರವಾನ್ವಿತ ಪ್ರಧಾನಿಗಳು ಮೂರನೇ ಭಾರಿ ಪ್ರಮಾಣವಚನ ಸ್ವೀಕಾರ ಮಾಡಿತಿದ್ದಾರೆ. ಮೋದಿ ಅವರ ಜೊತೆ ಎನ್ ಡಿ ಎ ಪಕ್ಷದ ಎಲ್ಲ ನಾಯಕರೂ ನಿಂತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದೆವು ಅದು ಸಾಧ್ಯವಾಗಲಿಲ್ಲ. ಒಂದು ಹಂತಕ್ಕೆ ರಾಜ್ಯದಲ್ಲಿ ಮೈತ್ರಿ ಯಶಸ್ಸಿ ಆಗಿದೆ ಈ ಯಶಸ್ಸಿಗೆ ಕಾರಣ ಕನ್ನಡಿಗರು. ಹಳೆ ಮೈಸೂರು ಭಾಗದಲ್ಲಿ ಸಂತಸ ಇದೆ ಇಲ್ಲಿ ಎರಡು ಸ್ಥಾನ ಸೋತಿರುವ ಬಗ್ಗೆ ನೋವಿದೆ. ರಾಜ್ಯದಲ್ಲಿ ಎರಡೂ ಪಕ್ಷಗಳ ನಾಯಕರು,ಕಾರ್ಯಕರ್ತರು ಒಟ್ಟಾಗಿ ಹೋರಾಟ ಮಾಡಿದ್ದೇವೆ. ದೇವೇಗೌಡರಾಗಲೀ, ಕುಮಾರಸ್ವಾಮಿಯವರಾಗಲಿ ಯಾವುದೇ ಷರತ್ತು ಹಾಕದೇ ಎನ್‌ಡಿಎಗೆ ಸಪೋರ್ಟ್ ಮಾಡಿದ್ದಾರೆ ಯಾವುದೇ ಸ್ಥಾನ ಕೊಟ್ಟರು ಕುಮಾರಸ್ವಾಮಿ ನಿಭಾಯಿಸ್ತಾರೆ ಕೊಟ್ಟಿಲ್ಲ ಅಂದ್ರು ಚಕಾರ ಎತ್ತಲ್ಲ ಎಂದು ತಿಳಿಸಿದರು. ಈಗ ನಮ್ಮ ಮೇಲೆ ಜವಾಬ್ದಾರಿ ಜಾಸ್ತಿ ಇದೆ ಕಾವೇರಿ ವಿವಾದ, ಮೇಕೆದಾಟು ಅನೇಕ ಜ್ವಲಂತ ಸಮಸ್ಯೆಗಳಿವೆ. ಮಂಡ್ಯದ ಜನತೆ ನಮಗೆ ಶಕ್ತಿ ತುಂಬಿದ್ದಾರೆ ಅವುಗಳನ್ನು ಸರಿಪಡಿಸುವ ಕೆಲಸ ಕುಮಾರಸ್ವಾಮಿ ಮಾಡಲಿದ್ದಾರೆ ಎಂದರು.
ಇನ್ನು ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿ ಮಾತನಾಡಿದ ಅವರು ನಾನು ಅನೇಕ ಸಲ ದೆಹಲಿಗೆ ಕುಮಾರಸ್ವಾಮಿ ಹೋದಾಗ ನಾನು ಹೋಗಿದ್ದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಾವು ಮೂರು ಸ್ಥಾನ ಕೇಳಿರಲಿಲ್ಲ, ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲ ಆಗಲಿಲ್ಲ ಈಗಲೂ ಅಷ್ಟೇ ನಾವು ಮುಂದಿನ ಉಪ ಚುನಾವಣೆಯಲ್ಲಿ ಗೊಂದಲ ಆಗೋಕೆ ಬಿಡಲ್ಲ ರಾಜ್ಯ ಬಿಜೆಪಿ ನಾಯಕರೊಂದಿಗೆ ಚರ್ಚಿಸಿ ಹೈಕಮಾಂಡ್ ನಾಯಕರಿಗೆ ವರದಿ ನೀಡ್ತೀವಿ.
ಕೇಂದ್ರ ನಾಯಕರು ಯಾವ ರೀತಿ ಸಲಹೆ ನಿಡುತ್ತಾರೊ ಅದರಂತೆ ನಾವು ನಡೆದುಕೊಳ್ಳುತ್ತೇವೆ. ಬಹಳ ಮುಖ್ಯವಾಗಿ ಚನ್ನಪಟ್ಟಣದ ಬಿಜೆಪಿ ಜೆಡಿಎಸ್ ಕಾರ್ಯಕರ್ತ ಭಾವನೆಗಳು ಏನಿದೆ ತಿಳಿದುಕೊಳ್ಳಬೇಕಾಗಿದೆ.ಬಿಜೆಪಿ ಟಿಕೆಟ್ ಸಿಕ್ಕರು ಸಂತೋಷ, ಜೆಡಿಎಸ್‌ಗೂ ಟಿಕೆಟ್ ಸಿಕ್ಕರು ಸಂತೋಷ ಅಂತಿಮವಾಗಿ ಕೇಂದ್ರ ನಾಯಕರಿಗೆ ಬಿಟ್ಟಿರುವ ವಿಚಾರ. ಇವತ್ತು ರಾಜ್ಯದಲ್ಲಿ ಕಾಂಗ್ರೆಸ್ ಹೊರಗೆ ಹಾಕಬೇಕು ಅದಕ್ಕೆ ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
Post a comment
Log in to write reviews