Samayanews.

Samayanews.

2024-12-24 12:56:27

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸಿಪಿ ಯೋಗೇಶ್ವರ್​​ ಕಾಂಗ್ರೆಸ್‌ಗೆ ಸೇರ್ಪಡೆ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಮಾಜಿ ಸಚಿವ, ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯಾರ್ಥಿಯಾಗಿ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಸೇರ್ಪಡೆ ಆಗಿದ್ದಾರೆ. 
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಸಿಪಿ ಯೋಗೇಶ್ವರ್​ ಯಾವ ಪಕ್ಷದಿಂದ ಸ್ಪರ್ಧೆ ಮಾಡ್ತಾರೆ ಹಾಗೂ ಕಾಂಗ್ರೆಸ್​ ಅಭ್ಯಾರ್ಥಿ ಯಾರು ಅನ್ನೋ ಕುತೂಹಲಗಳಿಗೆ ತೆರೆ ಬಿದ್ದಿದ್ದು, ಸದಾಶಿವ ನಗರದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಇಂದು ಬೆಳಗ್ಗೆ ಯೋಗೇಶ್ವರ್​​ ಆಗಮಿಸಿದರು. ಡಿಕೆಶಿ ನಿವಾಸದಲ್ಲಿ ಕಾಂಗ್ರೆಸ್​​ಗೆ ಸೇರುವ ಬಗ್ಗೆ ಮಾತುಕತೆ ನಡೆಸಿದರು.
ಒಂದೇ ಕಾರಿನಲ್ಲಿ  ಡಿಕೆ ಶಿವಕುಮಾರ್ ಹಾಗೂ ಸಿಪಿ ಯೋಗೇಶ್ವರ್​  ಸಿಎಂ ನಿವಾಸಕ್ಕೆ ತೆರಳಿದ್ದು, ಸಿದ್ದರಾಮಯ್ಯ ನಿವಾಸದಲ್ಲಿ ಯೋಗೇಶ್ವರ್​ ಅಧಿಕೃತವಾಗಿ ಕಾಂಗ್ರೆಸ್​ಗೆ ಸೇರ್ಪಡೆ ಆಗಿದ್ದಾರೆ. ಸಿದ್ದರಾಮಯ್ಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವ ಜಮೀರ್ ಅಹ್ಮದ್ ಹಾಗೂ ಡಿಕೆ ಸುರೇಶ್ ಸೇರಿ ಹಲವು ಕಾಂಗ್ರೆಸ್​ ನಾಯಕರಿದ್ದರು.
ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯಲ್ಲಿ ಸಿಪಿ ಯೋಗೇಶ್ವರ್ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯಾರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದರು. ಆದರೆ ಬಿಜೆಪಿ ಹೈಕಮಾಂಡ್​ ಜೆಡಿಎಸ್​ಗೆ ಟಿಕೆಟ್ ನೀಡಲು ತೀರ್ಮಾನಿಸಿತ್ತು. ಇದರಿಂದ ಬಂಡಾಯವೆದ್ದ ಸಿಪಿ ಯೋಗೇಶ್ವರ್, ಎಂಎಲ್​​ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಜೊತೆಗೆ ಚುನಾವಣೆಯಲ್ಲಿ ಪಕ್ಷೇತರ ಅಥವಾ ಕಾಂಗ್ರೆಸ್​ನಿಂದ ಸ್ಪರ್ಧಿಸುವ ಎಚ್ಚರಿಕೆಯನ್ನ ನೀಡಿದ್ದರು. ಸಿಪಿ ಯೋಗೇಶ್ವರ್​ ಬಂಡಾಯ ಏಳುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಕುಮಾರಸ್ವಾಮಿ, ಜೆಡಿಎಸ್​ ಚಿಹ್ನೆ ಅಡಿಯಲ್ಲಿ ಸ್ಪರ್ಧಿಸುವಂತೆ ಆಫರ್ ನೀಡಿದ್ದರು. ಇದನ್ನು ಯೋಗೇಶ್ವರ್ ತಿರಸ್ಕರಿಸಿದ್ದರು. ಕೊನೆಗೆ ಕುಮಾರಸ್ವಾಮಿ, ಬಿಜೆಪಿಯಿಂದಲೇ ಯೋಗೇಶ್ವರ್ ಸ್ಪರ್ಧಿಸಲು ಒಪ್ಪಿಕೊಂಡಿದ್ದರು ಎಂದು ಹೇಳಲಾಗಿತ್ತು. ಆ ಮೂಲಕ ಸಿಪಿ ಯೋಗೇಶ್ವರ್​ಗೆ ಮೂರು ಪಕ್ಷಗಳಿಂದ ಆಫರ್​ ಪಡೆದುಕೊಂಡಿದ್ದರು. ಆದರೆ ನಿನ್ನೆಯವರೆಗೂ ಗುಟ್ಟು ಬಿಟ್ಟುಕೊಡದ ಯೋಗೇಶ್ವರ್ ಇಂದು ಬೆಳಗ್ಗೆ ಕಾಂಗ್ರೆಸ್​ ಸೇರಿದ್ದಾರೆ.

img
Author

Post a comment

No Reviews