ಕೇಂದ್ರದಿಂದ ಬಂದಿರುವ 3454 ಕೋಟಿ ರೂ. ಇನ್ ಪುಟ್ ಸಬ್ಸಿಡಿ ಪೂರ್ಣ ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇದರಿಂದಾಗಿ ರಾಜ್ಯದ ಸುಮಾರು 34 ಲಕ್ಷ ರೈತರಿಗೆ ಡಿಬಿಟಿ (ನೇರಪಾವತಿ) ಮೂಲಕ ಇಂದಿನಿಂದಲೇ ಬೆಳೆ ನಷ್ಟ ಪರಿಹಾರ ವಿತರಿಸಲಾಗುವುದು. ಹಾಗೆಯೇ ಇನ್ನೂ 3-4 ದಿನಗಳಲ್ಲಿ ಎಲ್ಲಾ ರೈತರ ಖಾತೆಗೆ ಬೆಳೆ ನಷ್ಟ ಪರಿಹಾರ ಜಮಾ ಆಗಲಿದೆ.
ಈಗಾಗಲೇ ರೈತರಿಗೆ ವಿತರಿಸಿದ ಗರಿಷ್ಠ 2000 ರೂ.ವರೆಗಿನ ಪರಿಹಾರ ಮೊತ್ತ ಕಡಿತ ಮಾಡಿಕೊಂಡು ಬಾಕಿ ಮೊತ್ತವನ್ನು ಡಿಬಿಟಿ ಮೂಲಕ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.
ಎನ್.ಡಿ.ಆರ್.ಎಫ್. ಮಾರ್ಗಸೂಚಿ ಅನ್ವಯ ಖುಷ್ಕಿ, ನೀರಾವರಿ, ತೋಟಗಾರಿಕೆ ಬೆಳೆಗಳಿಗೆ ನಿಗದಿಯಾದ ಮೊತ್ತವನ್ನು ಅರ್ಹ ಫಲಾನುಭವಿ ರೈತರ ಖಾತೆಗೆ ಜಮಾ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಶುಕ್ರವಾರ ಮೊದಲಿಗೆ 15 ಲಕ್ಷ ರೈತರ ಖಾತೆಗೆ ಪರಿಹಾರ ಮೊತ್ತ
ಜಮಾ ಮಾಡಲಾಗುತ್ತದೆ. ಬಳಿಕ ಉಳಿದ ರೈತರಿಗೆ ಮೂರ್ನಾಲ್ಕು ದಿನಗಳಲ್ಲಿ ಪರಿಹಾರ ಹಣ ತಲುಪಲಿದೆ ಎಂದು ಹೇಳಲಾಗಿದೆ.
Tags:
- crop compensation
- compensation for crop damage
- crop loss
- compensation
- compensation for crop
- crop compensation to farmers
- crop damage
- govt neglect crop compensation
- 10000 per acre crop compensation
- farmers demand crop compensation
- farmers agitations for crop compensation
- adilabad farmers waiting for crop compensation
- compensation amount
- online compensation
- how much compensation
- compensation for farmer
- crop
- farmer gets ₹ 1 compensation
Post a comment
Log in to write reviews