ಕಿಡ್ನಿ ಮಾರಾಟಕ್ಕೂ ಕ್ರಿಪ್ಟೋಕರೆಸ್ಸಿ ಅಂಗಾಂಗಗಳನ್ನು ಕಳ್ಳಸಾಗಾಣೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್
ಮಾನವ ಕಳ್ಳಸಾಗಾಣೆ ಮೂಲಕ ವಿದೇಶಕ್ಕೆ ಜನರನ್ನು ಕರೆದೊಯ್ದು ಅಲ್ಲಿ ಅಂಗಾಂಗ ಬೇರ್ಪಡಿಸಿ ಮಾರಾಟ ಮಾಡುವ ಜಾಲ ಭೇದಿಸಿರುವ ಪೊಲೀಸರು, ಈ ಅಕ್ರಮದಲ್ಲಿ ಕ್ರಿಪ್ಟೋಕರೆಸ್ಸಿ ಬಳಸಿರುವ ಅಂಶ ಬಯಲಿಗೆಳೆದಿದ್ದಾರೆ.
ಪ್ರಕರಣ ಸಂಬಂಧ ನಾಸರ್ ಎಂಬಾತನನ್ನು ಬಂಧಿಸಿರುವ ಪೊಲೀಸರು, ಈ ಜಾಲದಲ್ಲಿರುವ ಇತರರಿಗಾಗಿ ಹುಡುಕಾಟ ನಡೆಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ಸ್ಫೋಟಕ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಅಂಗಾಗ ಮಾರಾಟ ಮಾಡಲು ತೆರಳಿದ್ದ ಬಹುತೇಕರು ಬೆಂಗಳೂರಿಗರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಆರೋಪಿ ನೀಡಿದ ಮಾಹಿತಿ ಪ್ರಕಾರ ಕಿಡ್ನಿ ನೀಡಲು ಬಯಸಿದವರನ್ನು ಮೊದಲಿಗೆ ಇರಾನ್ ದೇಶಕ್ಕೆ ಕರೆದೊಯ್ದು ಅಲ್ಲಿ ಕಿಡ್ನಿ ಮಾರಾಟ ಮಾಡಲಾಗುತ್ತಿತ್ತು. ಅಲ್ಲಿ ಒಂದು ಕಿಡ್ನಿಗೆ ಇಂತಿಷ್ಟು ದರ ಎಂದು ನಿಗದಿ ಪಡಿಸಿ, ಕಿಡ್ನಿ ನೀಡಿದವರಿಗೆ 6 ಲಕ್ಷ ರೂಪಾಯಿ ನೀಡಲಾಗುತ್ತಿತ್ತು.
ಅವಶ್ಯಕತೆ ಇದ್ದವರು 30-40 ಲಕ್ಷ ರೂಪಾಯಿ ಪಾವತಿಸಿ ಕಿಡ್ನಿಯನ್ನು ಅಲ್ಲಿನ ಆಸ್ಪತ್ರೆಗಳ ಮೂಲಕ ಕಸಿ ಮಾಡಿಕೊಳ್ಳುತ್ತಿದ್ದರು ಎಂಬ ಮಾಹಿತಿ ನಾಸರ್ ನಿಂದ ತಿಳಿದು ಬಂದಿದೆ. ಈವರೆಗೂ ಸುಮಾರು 20 ಕ್ಕೂ ಅಧಿಕ ವ್ಯಕ್ತಿಗಳಿಂದ ಕಿಡ್ನಿ ಪಡೆದು ಮಾರಾಟ ಮಾಡಲಾಗಿದೆ ಎನ್ನಲಾಗಿದೆ. ಈ ಅಕ್ರಮವನ್ನು ಕ್ರಿಪ್ಟೋ ಕರೆನ್ಸಿ ಮೂಲಕ ವಹಿವಾಟು ನಡೆಸಲಾಗುತ್ತಿತ್ತು. ಬೆಂಗಳೂರು ಅಲ್ಲದೆ ಹೈದಾರಾಬಾದ್ ಸೇರಿದಂತೆ ದೆಹಲಿ ವ್ಯಕ್ತಿಗಳ ಕಿಡ್ನಿ ಮಾರಾಟ ಮಾಡಲಾಗಿದ್ದು, ಕೇರಳ ಪೊಲೀಸರು ಬೆಂಗಳೂರಿನಲ್ಲಿ ಈ ದಂಧೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Post a comment
Log in to write reviews