ಬೆಂಗಳೂರು: ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳನ್ನು ಎಲ್ಲರೂ ಗಮನಿಸುತ್ತಿದ್ದೀರಿ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದು, ಅಪರಾಧ ಎಂದು ಪ್ರತಿಭಟನೆ ಮಾಡಿದ್ದಲ್ಲದೇ, ನೀವೆಲ್ಲ ರಾಜ್ಯಪಾಲರ ಪ್ರತಿಕೃತಿ ಗೆ ದಹನ ಮಾಡುತ್ತಿದ್ದಿರಾ. 2011 ರಲ್ಲಿ ರಾಜ್ಯಪಾಲರಾದ ಹಂಸ ರಾಜ್ ಭಾರದ್ವಾಜ್‌ರವರು ವಿರೋಧ ಪಕ್ಷದವರಾಗಿದ್ದು, ಅಂದು ಯಡಿಯೂರಪ್ಪ ಅವರ ಮೇಲೆ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದರು. ರಾಜ್ಯಪಾಲರು ಕಾನೂನು ಬದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಸೋಮವಾರದಂದು (ಆಗಸ್ಟ್ 19) ವಿಧಾನಸೌಧದಲ್ಲಿ ಸಿ.ಟಿ ರವಿಯವರು ಹೇಳಿಕೆ ನೀಡಿದ್ದಾರೆ.
ಅಂದು ಸಿದ್ದರಾಮಯ್ಯನವರು ಯಡಿಯೂರಪ್ಪನವರಿಗೆ ರಾಜೀನಾಮೆ ಕೊಡಲೇಬೇಕು ಎಂದು ವಿಧಾನಸೌಧದಲ್ಲಿ ಹೇಳಿದ್ದರು. ರಾಜೀನಾಮೆ ಕೊಡಿ ಅಂತಾ ಉಪದೇಶ ಮಾಡಿದ್ದು, ನಿಮಗೆ ನೆನಪಿಲ್ಲ ಅನ್ನಿಸುತ್ತೆ. ಸ್ವಲ್ಪ ಮರುವಿನ ಕಾಯಿಲೆ ಇದೆ. ಅವಾಗ ಏನು ಮಾತಾನಾಡಿದ್ದೀರಾ ಎಂದು ನೆನಪು ಮಾಡ್ಕೊಳ್ಳಿ. ಅವಾಗ ಯಾವ ರಾಜಭವನ ಮತ್ತು ಕಾನೂನು ಇತ್ತೋ ಇವಾಗ್ಲೂ ಅದೇ ಇದೆ. ನೀವು ಅವಾಗೇನು ಹೇಳಿದ್ದೀರಾ ಅಂತ ಇವಾಗ ನಾವು ಹೇಳ್ತೀವಿ ಸಿದ್ದರಾಮಯ್ಯನವರೇ YOU SHOULD ರಿಸೈನ್ ನೀವೂ ಹೇಳಿರುವ ರೀತಿಯಲ್ಲೇ ಹೇಳಿದ್ದೇವೆ ಎಂದು ಹೇಳಿದ್ದಾರೆ.
2011 ರಲ್ಲಿ ರಿಸೈನ್ ಮಾಡ್ತೀನಿ ಅಂತ ಏನು ಹೇಳಿದ್ರೋ ಹಾಗೇ ನಡೆದುಕೊಳ್ಳಿ ಎರಡು ನಾಲಿಗೆ ಆಗಬಾರದು. ಸಿದ್ದರಾಮಯ್ಯನವರು ಯಡಿಯೂರಪ್ಪನವರಿಗೆ ಕಾನೂನು ಹಾಗೂ ಪ್ರಜಾಪ್ರಭುತ್ವದ ಮೇಲೆ ಗೌರವ ಇದ್ರೆ ರಾಜೀನಾಮೆ ಕೊಡಿ ಅಂತಾ ಹೇಳಿದ್ದರು. ಹಾಗೆಯೇ ನಿಮಗೂ ಸಂವಿಧಾನ ಮೇಲೆ ಗೌರವ ಇದ್ರೆ ರಾಜೀನಾಮೆ ಕೊಡಿ ಎಂದು ಸಿ.ಟಿ.ರವಿ ಅವರು ಕಿಡಿಕಾರಿದ್ದಾರೆ.
ನೀವು ಯಾರನ್ನಾದರೂ ಮುಖ್ಯಮಂತ್ರಿ ಮಾಡಿ ಅದು ನಮಗೆ ಬೇಡ. ಆದರೆ ನೀವು ರಾಜಾ ಮಾರ್ಗ ಬಿಟ್ಟು ಅಡ್ಡದಾರಿ ಹಿಡಿದ್ದೀರಿ, ನೀವು ರಾಜ್ಯದಲ್ಲಿ ಆರಾಜಕತೆ ಸೃಷ್ಟಿ ಮಾಡುತ್ತಿದ್ದೀರಿ. ನೀವು ಗ್ಯಾರಂಟಿ ಕೊಟ್ಟಿದ್ದೇವೆ ಅಂತಾ ಹೇಳಿತಿರಲ್ಲಾ ಹೋಗಿ ಹಳ್ಳಿಗಳಲ್ಲಿ ಕೇಳಿ ನಿಮ್ಮ ಗ್ಯಾರಂಟಿ ಬಗ್ಗೆ ಜನರೇ ಹೇಳ್ತಾರೆ ಏನ್ ಗ್ಯಾರಂಟಿ ಕೊಟ್ಟಿದ್ದೀರಾ ಅಂತ. ನಿಮಗೆ ಲೂಟಿ ಹೊಡಿಯೋಕೆ ಅನುಮತಿ ಕೊಟ್ಟಿಲ್ಲ ಆದರೆ ದಲಿತರ ಹಣ ಲೂಟಿ ಹೊಡೆಯುತ್ತಿದ್ದೀರಿ. ನೀವು ಗ್ಯಾರಂಟಿ ಕೊಟ್ಟಿದ್ದಕ್ಕೆ ರಾಜ್ಯದ ಹಣ ಲೂಟಿ ಹೊಡೆಯುದ್ದೀರಾ...?
ಮುಡಾ ಹಗರಣದಲ್ಲಿ ಬಗೆದಷ್ಟು ಹೆಸರುಗಳು ಬೆಳಕಿಗೆ ಬರುತ್ತಿದ್ದು, ಇದರ ಮಧ್ಯೆ ಸೆಟ್ಲ್ಮೆಂಟ್ ಲೀಡ್ ಮಾಡ್ತಿದ್ದೀರಾ ಅದಕ್ಕೆ ಉಪ್ಪು ತಿಂದೋನು ನೀರು ಕುಡಿಲೇಬೇಕು. ಬಿಜೆಪಿ ಅವರಿಗೆ ಒಂದು ಕಾನೂನು ನಿಮಗೆ ಒಂದು ಕಾನೂನು ಸಿದ್ದರಾಮಯ್ಯ ಅವರೇ ಸಿದ್ದರಾಮಯ್ಯ ಮೇಲ್ನೋಟಕ್ಕೆ ನೋಡಿದ್ರೆ ಇವರೇನು ಭ್ರಷ್ಟಾಚಾರ ಅಲ್ಲಾ ಅಂತಾ ಅಂದು ಕೊಂಡಿದ್ದೇವೆ ಆದ್ರೆ ಇವಾಗ ಗೊತ್ತಾಗುತ್ತಿದೆ ಸಿದ್ದರಾಮಯ್ಯ ಅವರು ಎಷ್ಟು ಭ್ರಷ್ಟಾಚಾರ ಮಾಡ್ತಿದ್ದಾರೆ ಅಂತಾ. ನಿಮಗೆ ಹೈ ಕಮಾಂಡ್ ಹೇಳಿದ್ದಾರಾ ಲೂಟಿ ಮಾಡೋಕೆ ಜೆಡಿಎಸ್ ಅಲ್ಲಿ ಇದ್ದಾಗ ಹೇಳಿದ್ರಿ ನಾನು ಭ್ರಷ್ಟಾಚಾರ ಮಾಡಲ್ಲ ಅಂತಾ ಆದರೆ ಇವಾಗ ಎನ್ ಮಾಡ್ತಿದೀರಾ ಸಿದ್ದರಾಮಯ್ಯ ಅವರೆ...? 2011 ರಲ್ಲಿ ಹಾಗೂ 2012 ರಲ್ಲಿ ಏನು ಹೇಳಿದ್ರೀ ಹಾಗೇ ನಡೆದುಕೊಳ್ಳಲಿ ನೀವು ತಪ್ಪು ಮಾಡಿಲ್ಲ ಅಂದ್ರೆ ತನಿಖೆ ಮಾಡಲು ಸಹಕರಿಸಿ, ಆಮೇಲೆ ಮತ್ತೆ ಮುಖ್ಯಮಂತ್ರಿ ಆಗಿ ಎಂದರು.
Post a comment
Log in to write reviews