Samayanews.

Samayanews.

2024-12-24 12:27:50

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಲಿಪ್ಸ್ಟಿಕ್ ಹಚ್ಚಬಾರದು ಎಂಬ ನಿಯಮ ಉಲ್ಲಂಘಿಸಿದ ಮಹಿಳಾ ದಫೇದಾರ್ ವರ್ಗಾವಣೆ!

ಚೆನ್ನೈ: ಕಾರ್ಪೋರೇಷನ್​ನ ಪ್ರಥಮ ಮಹಿಳಾ ದಫೇದಾರ್ ಕಾರಣ ​​ ಅವರನ್ನು ವರ್ಗಾಯಿಸಿದ ಘಟನೆ ನಡೆದಿದೆ. ಅಧಿಕೃತ ಕಾರ್ಯಕ್ರಮದಲ್ಲಿ ಲಿಪ್​ಸ್ಟಿಕ್​ ಹಚ್ಚಬಾರದು ಎಂಬ ನಿಯಮವನ್ನು ಉಲ್ಲಂಘಿಸಿದ ಕಾರಣ ವರ್ಗಾವಣೆ ಮಾಡಲಾಗಿದೆ.

50 ವರ್ಷ ವಯಸ್ಸಿನ ಎಸ್​.ಬಿ ಮಾಧವಿ ಅವರು ವರ್ಗಾವಣೆಗೊಂಡವರು. ಮೇಯರ್​ ಪರಿವಾರದ ಭಾಗವಾಗಿದ್ದ ಇವರು ಅಧಿಕೃತ ಕಾರ್ಯಕ್ರಮದಲ್ಲಿ ಲಿಪ್​​ಸ್ಟಿಕ್​ ಧರಿಸಬಾರದು ಎಂಬ ನಿಯಮ ಉಲ್ಲಂಘಿಸಿ  ಶಿಕ್ಷೆಗೆ ಒಳಗಾಗಿದ್ದಾರೆ.

ಮೇಯರ್​​ ಆರ್​ ಪ್ರಿಯಾ ಅವರ ಆಪ್ತ ಸಹಾಯಕ ಶಿವಶಂಕರ್​​ ಇದರ ಕುರಿತು ಅವರ ಬಳಿ ಪ್ರಶ್ನಿಸಿದ್ದರು. ಇದಕ್ಕೆ ಎಸ್​.ಬಿ ಮಾಧವಿಯವರು ಸಮರ್ಥನೆ ನೀಡಿದ ಬೆನ್ನಲ್ಲೇ ವರ್ಗಾಯಿಸಲಾಗಿದೆ.

ಆಗಸ್ಟ್​ 6 ರಂದು ಎಸ್​.ಬಿ ಮಾಧವಿಯವರಿಗೆ ಈ ಕುರಿತು ನೋಟಿಸ್ ಕಳುಹಿಸಲಾಗಿತ್ತು. ಅದಕ್ಕೆ ಉತ್ತರಿಸಿದ ಅವರು ‘ನೀವು ನನಗೆ ಲಿಪ್​ಸ್ಟಿಕ್​ ಹಚ್ಚಬಾರದು ಎಂದು ಸೂಚಿಸಿದ್ದೀರಿ. ಆದರೆ ನಾನು ಹಚ್ಚಿದ್ದೇನೆ. ಇದು ಅಪರಾಧವಾದರೆ ಲಿಪ್​ ಸ್ಟಿಕ್​ ಹಚ್ಚುಬಾರದು ಎಂದು ನಿಷೇಧಿಸುವ ಸರ್ಕಾರದ ಆದೇಶವನ್ನು ತೋರಿಸಿ’ ಎಂದು ಹೇಳಿದ್ದರು.

 ‘ಇಂತಹ ಹಕ್ಕುಗಳು ಮಾನವ ಹಕ್ಕು ಉಲ್ಲಂಘನೆ. ನಾನು ನನ್ನ ಕರ್ತವ್ಯದ ಅವಧಿಯಲ್ಲಿ ಕೆಲಸ ಮಾಡದಿದ್ದರೆ ಈ ನೋಟಿಸ್​ ಮಾನ್ಯವಾಗುತ್ತದೆ’ ಎಂದು ಎಸ್​.ಬಿ ಮಾಧವಿ ಹೇಳಿದ್ದಾರೆ.

ಸದ್ಯ ಎಸ್​.ಬಿ ಮಾಧವಿಯವರನ್ನು ಕೆಲಸ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಾಗದಿರುವುದು, ಮೇಲಾಧಿಕಾರಿಗಳ ಅವಿಧೇಯತೆ ತೋರುವುದು ಮುಂತಾದ ಕಾರಣವನ್ನು ನೀಡಿ ಎಸ್​.ಬಿ ಮಾಧವಿಯವರಿಗೆ ನೋಟಿಸ್​ ಕೊಡಲಾಗಿದೆ. ಮಾತ್ರವಲ್ಲದೆ, ಮನಾಲಿ ವಲಯಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿದೆ.

img
Author

Post a comment

No Reviews