ದಲಿತ ಮಹಿಳೆಯೊಬ್ಬರ ಮನೆಯನ್ನುನೆರೆಮನೆಯವರು ಧ್ವಂಸ ಮಾಡಿರುವ ಘಟನೆ ಬೆಂಗಳೂರಿನ ಚಿಕ್ಕಜಾಲದ ಪಾಳೇಕಮ್ಮ ನಗರದಲ್ಲಿ ನಡೆದಿದೆ.
ಮನೆ ಕಳೆದುಕೊಂಡ ದಲಿತ ಮಹಿಳೆ ಗಂಡನನ್ನ ಕಳೆದುಕೊಂಡು ನಿರ್ಗತಿಕರಾಗಿದ್ದರು. ಆ ಮಹಿಳೆಗೆ ಆಸರೆ ಆಗಲೆಂದು ಆಕೆಯ ತಾಯಿ ಒಂದೂ ಪುಟ್ಟ ಮನೆಯನ್ನುಗ್ರಾಮದಲ್ಲಿ ಕಟ್ಟಿಕೊಟ್ಟಿದ್ದರು. ಆದರೆ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಮಣಿ, ಮಂಜು, ಪವಿತ್ರ, ಪಾಪಮ್ಮ,ರಾಜೇಶ್ವರಿ ಎನ್ನುವವರು ಏಕಾಏಕಿ ಈ ಜಾಗ ನಮಗೆ ಸೇರಿದ್ದು ಎಂದು ದರ್ಪದಿಂದ ಮನೆಯನ್ನು ಹೊಡೆದು ಹಾಕಿದ್ದಾರೆ ಎಂಬ ಆರೋಪವಿದೆ.
ಇದಲ್ಲದೆ ಗಲಾಟೆ ವೇಳೆ ಮನೆಯಲ್ಲಿ ಇದ್ದ ಇಬ್ಬರು ಹೆಣ್ಣು ಮಕ್ಕಳ ಜೊತೆ ಗಂಡಸರು ಅಸಭ್ಯವಾಗಿ ವರ್ತಿಸಿ ಮನೆಯಿಂದ ಹೊರ ದಬ್ಬಿದ್ದಾರೆ. ಈ ಕೃತ್ಯದ ಬಗ್ಗೆ ರಕ್ಷಿತಾ ಪೊಲೀಸರಿಗೆ ದೂರು ದಾಖಲಿಸಲು ಹೋದಾಗ ಪೊಲೀಸರು ಕೂಡ ದೂರು ದಾಖಲಿಸಿ ಕೊಳ್ಳದೆ ಅಸಡ್ಡೆ ತೋರಿದ್ದಾರೆ ಎನ್ನಲಾಗಿದೆ. ಈ ವಿಚಾರದಲ್ಲಿ ನಮಗೆ ನ್ಯಾಯ ಒದಗಿಸುವಂತೆ ನೊಂದ ಮಹಿಳೆ ನಮ್ಮಸಮಯ ವಾಹಿನಿಗೆ ಸಹಾಯ ಹಸ್ತ ಬೇಡಿದ್ದು ಸ್ಥಳಕ್ಕೆ ಧಾವಿಸಿದ ನಮ್ಮ ತಂಡ ಆರೋಪಿಗಳ ಮೇಲೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲು ನೆರವಾಗಿ ನ್ಯಾಯದ ಪರವಾಗಿ ಹೋರಾಡಿದೆ.
Post a comment
Log in to write reviews