Samayanews.

Samayanews.

2024-12-24 01:02:59

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಚಾರ್ಜ್​ಶೀಟ್​ ಮಾಹಿತಿ ಪ್ರಸಾರ ನಿರ್ಬಂಧ ಕೋರಿ ಕೋರ್ಟ್ ಮೆಟ್ಟಿಲೇರಿದ ದರ್ಶನ್

ಬೆಂಗಳೂರು: ನಟ ದರ್ಶನ್ ಅವರ ವಿರುದ್ಧ ಕೋರ್ಟ್​ಗೆ ಸಲ್ಲಿಕೆ ಆದ ಚಾರ್ಜ್​ಶೀಟ್​ನ ವಿಚಾರಗಳ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿತ್ತು. ದರ್ಶನ್ ಅವರ ಕ್ರೌರ್ಯ ಯಾವ ರೀತಿಯಲ್ಲಿ ಇತ್ತು ಎಂಬದನ್ನು ವಿವರಿಸಲಾಗುತ್ತಿದೆ. ಈಗ ದರ್ಶನ್ ಅವರು ಇದಕ್ಕೆ ನಿರ್ಬಂಧ ಕೋರಿ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ದರ್ಶನ್ ಪರ ವಕೀಲರು ಈ ವಿಚಾರದಲ್ಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

 ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ 17 ಜನರ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ ಆಗಿದೆ. ಚಾರ್ಜ್​ಶೀಟ್​ನಲ್ಲಿ ದರ್ಶನ್ ಅವರು ಏನು ಮಾಡಿದ್ದರು ಎಂಬ ಬಗ್ಗೆ ಮಾಹಿತಿ ಇದೆ. ರೇಣುಕಾ ಸ್ವಾಮಿಗೆ ಕೊಟ್ಟ ಚಿತ್ರ ಹಿಂಸೆಗಳ ಬಗ್ಗೆ ವಿವರಣೆ ನೀಡಲಾಗಿತ್ತು. ಇವುಗಳ ಪ್ರಸಾರದ ಮೇಲೆ ನಿರ್ಬಂಧ ಹೇರಿ ಎಂದು ದರ್ಶನ್ ಕೋರಿದ್ದಾರೆ. ಈ ಕುರಿತು ದರ್ಶನ್

ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಚಾರ್ಜ್​ಶೀಟ್​​​​ನಲ್ಲಿನ ಗೌಪ್ಯ ಮಾಹಿತಿ ಬಹಿರಂಗಪಡಿಸದಂತೆ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇತ್ತೀಚೆಗೆ ದರ್ಶನ್ ಇರೋ ಸೆಲ್​ಗೆ ಟಿವಿ ಬಂದಿದೆ. ಅವರು ಟಿವಿಗಾಗಿ ಬೇಡಿಕೆ ಇಟ್ಟಿದ್ದರು. ಜೈಲಿನ ನಿಯಮದಂತೆ ಅವರಿಗೆ ಟಿವಿ ನೀಡಲಾಗಿದೆ. ಟಿವಿ ವೀಕ್ಷಣೆ ಬಳಿಕ ಅವರು ಈ ನಿರ್ಧಾರ ತೆಗೆದುಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ.

ದರ್ಶನ್ ಅವರು ರೇಣುಕಾಸ್ವಾಮಿಗೆ ಮಾಂಸದ ಊಟ ತಿನ್ನಿಸಿದ್ದು, ಎದೆಗೆ ಒದ್ದಿದ್ದು, ಖಾಸಗಿ ಭಾಗಕ್ಕೆ ಒದ್ದಿದ್ದರ ಬಗ್ಗೆ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಆಗಿದೆ. ಈ ಎಲ್ಲಾ ವಿಚಾರಗಳು ದರ್ಶನ್​ ಚಿಂತೆ ಹೆಚ್ಚಿಸಿವೆ. ಈ ಕಾರಣದಿಂದಲೇ ದರ್ಶನ್ ಅವರು ನಿರ್ಬಂಧಕ್ಕಾಗಿ ಕೋರಿದ್ದಾರೆ ಎನ್ನಲಾಗಿದೆ.

 

img
Author

Post a comment

No Reviews