ಬೆಂಗಳೂರು : ಕಲರ್ಸ್ ಕನ್ನಡ ಪ್ರಸಾರ ಮಾಡುತ್ತಿರುವ ಶಾಂತಂ ಪಾಪಂ’ ಕ್ರೈಂ ಕಥಾನಕದ ಎಪಿಸೋಡ್ವೊಂದರಲ್ಲಿ ನಟ ದರ್ಶನ್ ಜೈಲು ಸೇರಿಸಿದ ಮರ್ಡರ್ ಕೇಸ್ ನ ಪ್ರಕರಣವನ್ನೇ ಹೋಲುವ ಕಥೆಯೊಂದು ಪ್ರಸಾರವಾಗುತ್ತಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ. ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಕುರಿತು ಭರ್ಜರಿ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ
ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಶಾಂತಂ ಪಾಪಂ’ ಕ್ರೈಂ ಕಥಾನಕದ ಶೋ ಜನಪ್ರಿಯವಾಗಿದೆ. ಇತ್ತೀಚೆಗೆ ಪ್ರಸಾರವಾದ ಡೇಡ್ ಡೆವಿಲ್ ದೇವದಾಸ್ ಎಪಿಸೋಡ್ ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನೇ ಹೋಲುವಂತಿದೆ. ಈ ಧಾರಾವಾಹಿ ನೋಡಿದ ಅನೇಕರಿಗೆ ರೇಣುಕಾ ಸ್ವಾಮಿ ಕೊಲೆ ಕೇಸ್ ನೆನಪಾಗಿದ್ದು, ಇದೇ ವಿಚಾರವನ್ನು ಸಾಕಷ್ಟು ಜನ ಕಾಮೆಂಟ್ ಮಾಡಿ ತಿಳಿಸುತ್ತಿದ್ದಾರೆ.
ರೇಣುಕಾಸ್ವಾಮಿ ಪ್ರಕರಣವನ್ನು ಹೋಲುವ ಡೇರ್ ಡೆವಿಲ್ ದೇವದಾಸ್ ಎಪಿಸೋಡ್‌ನಲ್ಲಿ ದಾಸ್ ಒಬ್ಬ ಶ್ರೀಮಂತ. ಆದರೆ ಕೊಲೆ ಆರೋಪದಲ್ಲಿ ಪೊಲೀಸರು ಯಾರಿಗೂ ಕ್ಯಾರೇ ಎನ್ನದೇ ದಾಸ್ ನನ್ನು ಬಂಧಿಸುತ್ತಾರೆ. ಅದಾಗಲೇ ಮದುವೆ ಆಗಿದ್ದರೂ ಖ್ಯಾತ ಉದ್ಯಮಿ ದಾಸ್ ಒಬ್ಬ ನಟಿಯ ಮೋಹ ಪಾಶಕ್ಕೆ ಸಿಲುಕ್ತಾನೆ.
ಆ ನಟಿಗೆ ಒಬ್ಬ ಅನಾಮಿಕನಿಂದ ಕೆಟ್ಟ ಕೆಟ್ಟ ಮೆಸೇಜ್‌ಗಳು ಬರಲು ಆರಂಭಿಸುತ್ತೆ. ಅದನ್ನು ಆಕೆ ದಾಸ್ ಮುಂದಿಡುತ್ತಾಳೆ. ಅದನ್ನು ಕೇಳಿ ಉದ್ಯಮಿ ರಾಕ್ಷಸನಾಗ್ತಾನೆ. ದಾಸ್ ತಮ್ಮ ಆಪ್ತರಿಗೆ ಹೇಳಿ ಕೆಟ್ಟದಾಗಿ ಮೆಸೇಜ್ ಮಾಡಿದ ಕಿಡಿಗೇಡಿಯನ್ನು ಅಪಹರಿಸಿ ಕರೆತರುವಂತೆ ಹೇಳಿ, ಆತನನ್ನು ಕರೆತಂದು ಒಂದು ಶೆಡ್ ಮುಂದೆ ಥಳಿಸುವುದನ್ನು ಪ್ರೋಮೊದಲ್ಲಿ ನೋಡಬಹುದು. ಇದನ್ನೆಲ್ಲಾ ನೋಡಿದವರು ಇದು ರೇಣುಕಾಸ್ವಾಮಿ ಕಥೆನೇ? ಎಂದು ಊಹಿಸಿಕೊಳ್ಳುತ್ತಿದ್ದಾರೆ.
ಡೇರ್ ಡೆವಿಲ್ ದೇವದಾಸ್ ಎಪಿಸೋಡ್‌ನಲ್ಲಿ ದರ್ಶನ್ ಹೋಲುವ ದಾಸ್ ಪಾತ್ರ, ಪವಿತ್ರಾಗೌಡ-ಪ್ರೇರಣಾ, ವಿಜಯಲಕ್ಷ್ಮಿ-ವಿನಯ, ರೇಣುಕಾಸ್ವಾಮಿಗೆ ವಿರೂಪಾಕ್ಷ ಅಂತಾ ಪಾತ್ರದ ಹೆಸರು ಕೊಟ್ಟಿದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಈ ಎಪಿಸೋಡ್ ಸಖತ್ ವೈರಲ್ ಹಾಗೂ ಭಾರೀ ಟ್ರೋಲ್ ಆಗುತ್ತಿದೆ. ರವಿನ್ ನಿರ್ದೇಶನ ಮಾಡಿರುವ ಕಲರ್ಸ್ ಕನ್ನಡದ ಕಥೆಗೆ ಎಲ್ಲೆಲ್ಲೂ ಭಾರೀ ಮೆಚ್ಚುಗೆ ವ್ಯಕ್ತವಾಗುವುದರ ಜೊತೆಗೆ ಶಾಂತಂ ಪಾಪಂನ ಈ ಎಪಿಸೋಡ್ ನಿಂದಾಗಿ ಕಲರ್ಸ್ ಕನ್ನಡದ TRP ಗಗನಕ್ಕೇರುತ್ತಿದೆ.
Post a comment
Log in to write reviews