ಕರ್ನಾಟಕ
ದರ್ಶನ್ ಭೇಟಿಯಾಗಿ ಸಾಂತ್ವನ ಹೇಳಿದ ತಾಯಿ ಮೀನಾ ತೂಗುದೀಪ, ಅಕ್ಕ ದಿವ್ಯ
ಬಳ್ಳಾರಿ: ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಬಂಧಿಯಾಗಿರುವ ದರ್ಶನ್ ಅವರನ್ನು ತಾಯಿ ಮೀನಾ ತೂಗುದೀಪ, ಅಕ್ಕ ದಿವ್ಯ ಭೇಟಿಯಾಗಿ ಸಾಂತ್ವನ ಹೇಳಿದರು. ಇಂದು(ಸೆಪ್ಟೆಂಬರ್ 19) ಬೆಳಗ್ಗೆ ಜೈಲಿಗೆ ಆಗಮಿಸಿದ ಮೀನಾ, ದಿವ್ಯ ಜತೆಗೆ ದರ್ಶನ್ ಬಾವ ಮಂಜುನಾಥ, ಅಕ್ಕನ ಮಕ್ಕಳು ಸೇರಿ ಐದು ಜನ ಕುಟುಂಬಸ್ಥರು ಭೇಟಿಯಾಗಿದ್ದು,
ಜೈಲು ಸಿಬ್ಬಂದಿ ಹೈಸೆಕ್ಯೂರಿಟಿ ಸೆಲ್ ವಿಸಿಟಿಂಗ್ ರೂಮ್ಗೆ ದರ್ಶನ್ ಅವರನ್ನು11.34ಕ್ಕೆ ಕರೆತಂದರು. ದರ್ಶನ್ ಜೊತೆ ಅವರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ತಾಯಿ, ಅಕ್ಕನ ಕಂಡು ದರ್ಶನ್ ಭಾವುಕರಾದರು. ಕುಟುಂಬಸ್ಥರು ಸಹ ದರ್ಶನ್ ಸ್ಥಿತಿ ಕಂಡು ಭಾವುಕರಾದರು. ಇದೇ ವೇಳೆ ತಂದಿದ್ದ ಬಟ್ಟೆ, ಬೇಕರಿ ತಿನಿಸುಗಳನ್ನು ದರ್ಶನ್ ಅವರಿಗೆ ನೀಡಲಾಯಿತು.
ದರ್ಶನ್ರವರು ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಜೈಲು ಪಾಲಾಗಿ ಮೊದಲು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಜೈಲಿನಲ್ಲಿನ ಫೊಟೋ ವೈರಲಾದ ಬೆನ್ನಲ್ಲೇ ದರ್ಶನ್ ಸೇರಿ ಪ್ರಕರಣದ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಗೊಳಿಸಲಾಯಿತು. ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬಂದ ನಂತರ ಇಂದೇ ಅವರ ತಾಯಿ ಮೀನಾ ತೂಗುದೀಪ ಅವರು ಮಗನನ್ನು ಭೇಟಿ ಮಾಡಿದರು.
Post a comment
Log in to write reviews