ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66 ರ ಅಗಲೀಕರಣ ಕಾರ್ಯ ಆರಂಭವಾಗಿ 10 ವರ್ಷ ಕಳೆದರೂ ಇನ್ನೂ ಮುಗಿದಿಲ್ಲ. ಒಂದೆಡೆ ಕಾಮಗಾರಿ ಮುಗಿಸದೆ ಜನರ ವಿರೋಧದ ನಡುವೆಯೂ ಟೋಲ್ ಸಂಗ್ರಹಿಸುತ್ತಿದ್ದಾರೆ. ಇನ್ನೊಂದೆಡೆ ಉಳಿದ ಕೆಲಸ ಪೂರ್ಣಗೊಳಿಸಲು ಗುತ್ತಿಗೆ ಪಡೆದ ಕಂಪನಿ ವಿಳಂಬ ಮಾಡುತ್ತಿದೆ. ಇದರಿಂದಾಗಿ ಪ್ರಯಾಣಿಕರಿಗೆ ಪ್ರತಿ ದಿನ ಕಿರಿಕಿರಿ ಉಂಟಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ 66 ರ ಅಗಲೀಕರಣವನ್ನು ಮೂರು ವಷ೯ದಲ್ಲಿ ಮುಗಿಸುವುದಾಗಿ ಐಆರ್‌ಬಿ ಕಂಪನಿ ಒಪ್ಪಂದ ಮಾಡಿಕೊಂಡಿತ್ತು ಸುಮಾರು 10 ವಷ೯ಗಳ ಹಿಂದೆಯೇ ಕಾಮಗಾರಿಯನ್ನು ಪ್ರಾರಂಭಿಸಿತ್ತು . ಆದೆರೆ ಈವರೆಗೂ ಕಾಮಗಾರಿ ಕೆಲಸ ಪೂಣ೯ಗೊಳಿಸಿಲ್ಲ, ಅಲ್ಲಲ್ಲಿ ಅಪೂಣ೯ವಾಗಿರುವ ಕೆಲಸವನ್ನು ಕೆಲ ದಿನಗಳಿಂದ ಮಾಡದೇ ನಿಲ್ಲಿಸಲಾಗಿದ್ದು, ಕಾಮಿ೯ಕರು ತಮ್ಮ ತಮ್ಮ ಊರುಗಳಿಗೆ ಹೋಗಿದ್ದು, ಮಳೆಗಾಲ ಆರಂಭವಾಗುತ್ತಿರುವ ಕಾರಣ ರಸ್ತೆಯಲ್ಲಿ ಜನರು ಓಡಾಡಲು ಭಯ ಪಡುವಂತಾಗಿದೆ.
ಕುಂದಾಪುರ ಗಡಿಯಿಂದ ಗೋವಾ ಗಡಿಯವರೆಗಿನ ಹೆದ್ದಾರಿ ಅಗಲೀಕರಣದಲ್ಲಿ ಭಟ್ಕಳದಿಂದ ಕಾರವಾರ ತಾಲೂಕಿನ ನಡುವೆ ಒಟ್ಟು 187.240 ಕಿಲೋಮೀಟರ್ ಕಾಮಗಾರಿ ಇದಾಗಿದ್ದು. 2014ರ ಮಾರ್ಚ್‌ನಲ್ಲಿಯೇ ಕೆಲಸ ಆರಂಭವಾಗಿದ್ದು, ಇದುವರೆಗೂ ಮುಗಿಸಿಲ್ಲ. ಇದರಿಂದ ಪ್ರತಿನಿತ್ಯ ಓಡಾಡುವಾಗ ಕಿರಿಕಿರಿ ಅನುಭವಿಸುವ ಜೊತೆಗೆ ಟೋಲ್ ಕಟ್ಟಬೇಕಾಗಿರುವುದು ಸವಾರರಿಗೆ ಹೊರೆಯಾಗಿ ಪರಿಣಮಿಸಿದೆ.
ರಸ್ತೆ ಕೆಲಸ ಪೂರ್ಣ ಮಾಡದೇ ಟೋಲ್ ಕಟ್ಟುವುದು ಬಹಳ ಕಷ್ಟವಾಗುತ್ತಿದೆ. ಈಗ ಕಾಮಗಾರಿ ಕೂಡ ನಿಲ್ಲಿಸಲಾಗಿದೆ. ಜನರು ಕೇಳಿದರೆ ಯಾರೂ ಕೂಡ ಸ್ಪಂದಿಸುತ್ತಿಲ್ಲ. ಹತ್ತು ವರ್ಷವಾದರೂ ಕೆಲಸ ಮುಗಿಸಿಲ್ಲ. ರಸ್ತೆಯಲ್ಲಿ ಸಂಚಾರ ಮಾಡುವುದು ಕಷ್ಟವಾಗಿದ್ದು, ಬಹಳಷ್ಟು ಅಪಘಾತಗಳಾಗುತ್ತಿವೆ. ಕಾಮಗಾರಿ ಹಿನ್ನೆಲೆಯಲ್ಲಿ ಡಿವೈಡರ್ ಗಳ ವ್ಯವಸ್ಥೆಯನ್ನೂ ಸರಿಯಾಗಿ ಮಾಡಿಲ್ಲ ಎಂದು ಸ್ಥಳೀಯ ವಾಹನ ಸವಾರ ಮಂಜುನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Post a comment
Log in to write reviews