ಬೆಂಗಳೂರು : ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 23ರಂದು ಕೇಂದ್ರ ಬಜೆಟ್ 2024-25 ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಮೆಟ್ರೋ ಮಹಾನಗರಗಳ ಸಾಲಿನಲ್ಲಿರುವ ಕರ್ನಾಟಕ ರಾಜಧಾನಿ ಬೆಂಗಳೂರನ್ನು ಮನೆ ಬಾಡಿಗೆ ಭತ್ಯೆ (HRA) ತರಿಗೆ ವಿನಾಯಿತಿ ನೀಡುವಂತೆ ಬಜೆಟ್‌ನಲ್ಲಿ ಘೋಷಣೆ ಮಾಡುವ ನೀರಿಕ್ಷೆ ಇದೆ.
2024ರ ಬಜೆಟ್ ಚರ್ಚೆಗಳು ಪ್ರಾರಂಭವಾಗುತ್ತಿದ್ದಂತೆ, ಸಮಗ್ರ ತೆರಿಗೆ ಪರಿಹಾರ ಕ್ರಮಗಳ ಬೇಡಿಕೆಗಳ, ನಿರೀಕ್ಷೆಗಳು ಹೆಚ್ಚಾಗುತ್ತಲೇ ಹೋಗುತ್ತದೆ. ಈ ಪೈಕಿ ಬೆಂಗಳೂರಿನಲ್ಲಿ ಎಚ್‌ಆರ್‌ಎ ವಿನಾಯಿತಿ ನೀಡಬೇಕು ಎಂಬುದು ಆಗಿದೆ.
HRA ಸ್ವೀಕರಿಸುವ ಮತ್ತು ಬಾಡಿಗೆ ಪಾವತಿಸುವ ಉದ್ಯೋಗಿಗಳು ಹಳೆಯ ಆದಾಯ ತೆರಿಗೆ ಪದ್ಧತಿಯ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು. ವಿನಾಯಿತಿ ದರವು ಉದ್ಯೋಗಿ ಮೆಟ್ರೋ ನಗರದಲ್ಲಿ ವಾಸಿಸುತ್ತಿದ್ದಾರೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. 50% HRA ವಿನಾಯಿತಿಯ 4 ನಗರಗಳು HRA ಪಡೆಯುವ ಉದ್ಯೋಗಿ ಬಾಡಿಗೆ ಮನೆಯಲ್ಲಿ ವಾಸಿಸದಿದ್ದರೆ, ಆತ ಸಂಪೂರ್ಣ ಭತ್ಯೆಯು ತೆರಿಗೆಗೆ ಒಳಪಡುತ್ತದೆ. ಸದ್ಯ ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಶೇಕಡಾ 50% HRA ವಿನಾಯಿತಿಗೆ ಅರ್ಹತೆ ಪಡೆದಿವೆ. ಆದರೆ ಬೆಂಗಳೂರು ಸೇರಿದಂತೆ ಇತರ ನಗರಗಳು 40% ವರ್ಗಕ್ಕೆ ಸೇರುತ್ತವೆ.
ಬೆಂಗಳೂರು ಮೆಟ್ರೋ ಪಾಲಿಟನ್ ಸಿಟಿ ಆದರೂ ಸಹ ಎಚ್‌ಆರ್‌ಎ ತೆರಿಗೆ ವಿನಾಯಿತಿಯಂತಹ ವಿಷಯಗಳಲ್ಲಿ ವರ್ಗಿಕರಣಗೊಳ್ಳದೇ, ನಾನ್-ಮೆಟ್ರೋಪಾಲಿಟನ್ ಪ್ರದೇಶಗಳ ರೀತಿ ಇರುವುದು ಸರಿಯಲ್ಲ. ಶೀಘ್ರವೇ ಈ ಮನವಿಯನ್ನು ಮರುಪರಿಶೀಲಿಸುವುದು ಅತ್ಯಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.
Post a comment
Log in to write reviews