ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿನಿಯ ಮಾರ್ಫಿಂಗ್ ಫೋಟೋ ವೈರಲ್ ಆಗುತ್ತಿದೆ, ಇದರಿಂದ ಪೋಷಕರು ಆತಂಕದಲ್ಲಿದ್ದಾರೆ.
ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯ AI ಅಲ್ಲಿ ರಚನೆಯಾದ ನಗ್ನ ಫೋಟೋ ವೈರಲ್ ಆಗುತ್ತಿದೆ.ಮೇ 24 ರಂದು ಬೆಳಕಿಗೆ ಬಂದ ಪ್ರಕರಣ ಈಗ ಚರ್ಚೆಗೆ ಗ್ರಾಸವಾಗುತ್ತಿದೆ.
50ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ಇನ್ಸ್ಟ್ರಾಗ್ರಾಂ ಅಲ್ಲಿ ಗ್ರೂಪ್ ರಚನೆ ಮಾಡಲಾಗಿತ್ತು. ಗ್ರೂಪ್ ನಲ್ಲಿ ಅನಾಮಧೇಯ ವ್ಯಕ್ತಿಯಿಂದ ವಿದ್ಯಾರ್ಥಿನಿಯರ ಮಾರ್ಫಿಂಗ್ ಫೋಟೋಸ್ ವೈರಲ್ ಆಗುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆದರೆ, ಆ ಅನಾಮೇಧೆಯ ವ್ಯಕ್ತಿ ಯಾರು ಅನ್ನೋದು ಕೂಡ ವಿದ್ಯಾರ್ಥಿನಿಯರಿಗೆ ಅರಿವಿಲ್ಲ. ಶಾಲಾ ಗ್ರೂಪ್ ಅಲ್ಲಿ ಇರುವ ಕಾರಣ ಅವನು ಖಂಡಿತ ವಿದ್ಯಾರ್ಥಿ ಆಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ವಿಚಾರ ತಿಳಿದ ಕೂಡಲೇ ವಿದ್ಯಾರ್ಥಿನಿಯರು ಕುಗ್ಗಿ ಹೋಗಿದ್ದಾರೆ. ಅಲ್ಲದೆ ಮಕ್ಕಳ ಪೋಷಕರು ಸೈಬರ್ ಸೆಲ್ ಗೆ ದೂರು ಕೂಡಾ ನೀಡಿದ್ದಾರೆ. ಡೀಪ್ ಫೇಕ್ ಕಾಟಕ್ಕೆ ವಿದ್ಯಾರ್ಥಿಗಳು ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ .
Post a comment
Log in to write reviews