ಡಿವೋರ್ಸ್ ಪಡೆಯಲಿದ್ದಾರಾ ದೀಪಿಕಾ-ರಣವೀರ್? ಮದುವೆ ಫೋಟೋಸ್ ಡಿಲೀಟ್ ಮಾಡಿದ್ಯಾಕೆ?
ಪ್ರೆಗ್ನೆನ್ಸಿ ಅನೌನ್ಸ್ ಮಾಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವಾಗಲೇ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ನಡುವಿನ ಡಿವೋರ್ಸ್ ವಿಚಾರ ವೈರಲ್ ಆಗಿದೆ. ಈ ಜೋಡಿ ಶ್ರೀಘ್ರದಲ್ಲಿಯೇ ಡಿವೋರ್ಸ್ ಪಡೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಸುದ್ದಿ ಸೋಷಿಯಲ್ ಮೀಡಿಯಾದ್ಯಂತ ವೈರಲ್ ಆಗಿದೆ.
ಅಷ್ಟಕ್ಕೂ ಇದಕ್ಕೆಲ್ಲ ಕಾರಣ ಆಗಿದ್ದು ರಣವೀರ್ ಸಿಂಗ್ ಅವರ ನಡೆ. ದೀಪಿಕಾ ಪಡುಕೋಣೆ ಅವರ ಪತಿ, ಬಾಲಿವುಡ್ ನಟ ರಣವೀರ್ ಸಿಂಗ್ ಅವರು 2018ರಲ್ಲಿ ನಡೆದ ತಮ್ಮ ಹಾಗೂ ದೀಪಿಕಾ ಪಡುಕೋಣೆಯ ಮದುವೆ ಫೋಟೋಗಳನ್ನು ದಿಢೀರ್ ಸೋಷಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ದಾರೆ. ಈ ಸುದ್ದಿ ಎಲ್ಲಾ ಕಡೆ ವೈರಲ್ ಆಯಿತು.
ಅಷ್ಟಕ್ಕೂ ಮೊದಲ ಮಗುವಿನ ನಿರೀಕ್ಷೆಯಲ್ಲಿರುವಾಗ ಕಠಿಣ ನಿರ್ಧಾರ ತೆಗೆದುಕೊಂಡರಾ ಬಾಲಿವುಡ್ ಜೋಡಿ? ಪವರ್ ಕಪಲ್ ಮಧ್ಯೆ ಏನಾಯಿತು? ಅಸಲಿಗೆ ಆಗಿದ್ದೇನು? ನಿಜಕ್ಕೂ ಈ ಜೋಡಿ ಸಪರೇಟ್ ಆಗುತ್ತಾರಾ? ಪರಸ್ಪರ ಸಮ್ಮತಿಯಿಂದ ವಿಚ್ಛೇದನೆ ಪಡೆದುಕೊಂಡು ಬೇರೆಯಾಗುತ್ತಾರಾ? ಇದು ನಿಜಾನಾ?
ರಣವೀರ್ ಅವರು ಪೋಟೋಸ್ ಡಿಲೀಟ್ ಮಾಡಿದ್ದಾರೆ ಎಂದು ಕನ್ಫರ್ಮ್ ಮಾಡಿ ಹೇಳೋಕಾಗಲ್ಲ. ಅವರು ಫೋಟೋವನ್ನು ಆರ್ಚೀವ್ಗೆ ಹಾಕಿರುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಅವರು ಫೋಟೋವನ್ನು ತಮ್ಮ ಪ್ರೊಫೈಲ್ನಲ್ಲಿ ಪಬ್ಲಿಕ್ ನಿಂದ ಹೈಡ್ ಮಾಡಿಟ್ಟಿರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
Post a comment
Log in to write reviews