ಹಗರಿಬೊಮ್ಮನಹಳ್ಳಿ ಪಟ್ಟಣದ ಸುತ್ತ 10 ಕಿಲೋ ಮೀಟರ್ ವ್ಯಾಪ್ತಿಯನ್ನು ಹಸಿರು ವಲಯವನ್ನಾಗಿ ಘೋಷಿಸಲು ಒತ್ತಾಯಿಸಿ ಎರಡನೇ ಪೂರ್ವಭಾವಿ ಸಭೆ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಭಾಗವಹಿಸಿದ ಅನೇಕ ಮುಖಂಡರು ಕೃಷಿ ಭೂಮಿಯನ್ನು ಬಡಾವಣೆಗಳನ್ನಾಗಿ ನಿರ್ಮಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಇದರ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಬೀದಿ ನಾಟಕ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳ ಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ್ ಮಾತನಾಡಿ ಪಟ್ಟಣ ಸೇರಿದಂತೆ ಸುತ್ತ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲೆಯೆತ್ತಿರುವ ರಿಯಲ್ ಎಸ್ಟೇಟ್ ದಂಧೆಗೆ ಕಡಿವಾಣ ಹಾಕಬೇಕಾಗಿದೆ. ಕೃಷಿ ಭೂಮಿಗಾಗಿ ನಾವು ಎಂಬ ಸಮಿತಿಯಿಂದ ಈಗಾಗಲೇ ಎನ್ಎ ಮಾಡದಂತೆ ಮನವಿ ಸಲ್ಲಿಸಲಾಗಿದೆ. ಎರಡನೆಯ ಹಂತದ ಹೋರಾಟದ ರೂಪರೇಷೆಗಳಗಾಗಿ ಈ ಸಭೆ ಕರೆಯಲಾಗಿದೆ. ಯಾವುದೇ ಕಾರಣಕ್ಕೂ ನಾವು ರೈತರಿಗೆ ಅನ್ಯಾಯವಾಗದಂತೆ ಕೃಷಿ ಭೂಮಿಯನ್ನು ಕಳೆದುಕೊಳ್ಳದಂತೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಕೃಷ್ಣಮೂರ್ತಿ. ಗದ್ದಿಕೇರಿ ದೊಡ್ಡಬಸಪ್ಪ .ರಾಮರೆಡ್ಡಿ. ಸುರೇಂದ್ರ. ಕಾಳಿ ಬಸವರಾಜ್. ಉಮಾಪತಿ ಶೆಟ್ಟರ್. ಕೋಡಿಹಳ್ಳಿ ಮಂಜುನಾಥ .ಹೇಮೇಶ್ .ಹುಳ್ಳಿ ಮಂಜುನಾಥ್. ಶಾಬುದ್ದೀನ್. ಸರ್ದಾರ್ ಯಮನೂರಪ್ಪ. ಕರಿ ಹನುಮಂತಪ್ಪ. ಬಲ್ಲಾಹುಣಿಸಿ ನಾಗರಾಜ್. ಅಂಕ ಸಮುದ್ರ ವೆಂಕಟೇಶ್. ಪೂಜಾರಿ ಸಿದ್ದಪ್ಪ. ಮಾತನಾಡಿದರು ಬಿ ಕೃಷ್ಣ. ಬಿ.ಕೆ ಬಸವರಾಜ್. ಶ್ರೀನಿವಾಸ್ ಫಾಸ್ಟರ್. ಬಸವರಾಜ್ ರೆಡ್ಡಿ. ಪರಶುರಾಮ್. ಎಚ್.ದುರ್ಗಪ್ಪ. ಕೆ ವಿರೂಪಾಕ್ಷಪ್ಪ. ಬೆಳ್ಳಕ್ಕಿ ರಾಮಣ್ಣ. ದಾದಾಪೀರ್. ಒಂಟಿಗೋಡಿ ವೀರೇಶ್. ಎಂ ಶಿವರಾಜ್. ಹೆಗ್ಡಾಳ್ ರವಿಕುಮಾರ್. ಕೆಂಚಪ್ಪ. ಇನ್ನಿತರರು ಭಾಗವಹಿಸಿ ತಮ್ಮ ಸಲಹೆ ನೀಡಿದರು.
Post a comment
Log in to write reviews